ಮಹಿಳೆಯರು ತಮ್ಮಿಚ್ಛೆಯಂತೆ ಬದುಕುವ ಹಕ್ಕನ್ನು ಕಳೆದುಕೊಂಡ ಸೌದಿ ಅರೇಬಿಯಾದಂಥ ದೇಶದಲ್ಲಿ ಇದು ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ. ಈ ದೇಶದಲ್ಲಿ ಇದೇ ಮೊದಲ ಬಾರಿಗೆ ‘ಮಹಿಳಾ ಕಾಲ್ ಸೆಂಟರ್’ ಶುರುವಾಗುತ್ತಿರುವುದು ಗಮನಾರ್ಹ ಬೆಳವಣಿಗೆ.
ಮಧ್ಯಪ್ರಾಚ್ಯದಲ್ಲಿ ಮುಂಚೂಣಿಯಲ್ಲಿರುವ ಪ್ರವಾಸಿ ನಿರ್ವಹಣಾ ಕಂಪೆನಿಗಳಲ್ಲಿ ಒಂದಾದ ‘ಕನೂ ಟ್ರಾವೆಲ್’ ಕಂಪೆನಿಯು ಕೇವಲ ಮಹಿಳೆಯರಿಗೆಂದೇ ವಿಶೇಷ ‘ ಕಾಲ್ ಸೆಂಟರ್’ ಆರಂಭಿಸುವುದಾಗಿ ಹೇಳಿಕೊಂಡಿದೆ. ಈಗಾಗಲೇ 20 ಮಹಿಳಾ ಸಿಬ್ಬಂದಿಗೆ ಈ ದಿಸೆಯಲ್ಲಿ ತರಬೇತಿ ಕೂಡ ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.