ADVERTISEMENT

ಮಾರುತಿ ಸುಜುಕಿ: ಮುಷ್ಕರ ಅಂತ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಗುಡಗಾಂವ್ (ಪಿಟಿಐ): ದೇಶದ ಅತಿದೊಡ್ಡ ವಾಹನ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿಯ ಮಾನೆಸರ್ ಘಟಕದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದ್ದ ಕಾರ್ಮಿಕರ ಮುಷ್ಕರ ಶುಕ್ರವಾರ ಅಂತ್ಯಗೊಂಡಿದೆ.

ಸಂಸ್ಥೆಯ ಆಡಳಿತ ಮಂಡಳಿ, ಹರಿಯಾಣ ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳ ಮಧ್ಯೆ ಆಗಿರುವ ತ್ರೀಪಕ್ಷೀಯ ಒಪ್ಪಂದದ ಫಲವಾಗಿ ಮುಷ್ಕರ ಕೊನೆಗೊಂಡಿದೆ.

ಈ ಘಟಕದಲ್ಲಿ ಪ್ರತಿ ದಿನ 1,200 ವಾಹನಗಳು ತಯಾರಾಗುತ್ತಿದ್ದು, ಕಾರ್ಮಿಕರು ಈ ತಿಂಗಳ 7ರಿಂದ ಮುಷ್ಕರ ನಡೆಸುತ್ತಿದ್ದರು. ಈ ಮೊದಲಿನ ಮುಷ್ಕರದ ಕಾರಣಕ್ಕೆ ಅಮಾನತುಗೊಂಡಿದ್ದ 44 ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲು ಒತ್ತಾಯಿಸಿ ಈ ಮುಷ್ಕರ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.