ಮುಂಬೈ (ಪಿಟಿಐ): ಹಲವಾರು ಪ್ರಮುಖ ಉದ್ದಿಮೆ ಸಂಸ್ಥೆಗಳು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2010-11ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುಂಗಡ ತೆರಿಗೆ ಪಾವತಿಸಿವೆ.
ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಮುಂಗಡ ತೆರಿಗೆ ಪಾವತಿಸಿರುವುದು, ಅವುಗಳ ಹಣಕಾಸು ಸಾಧನೆ ಆರೋಗ್ಯಕರವಾಗಿರುವುದನ್ನು ಸಾಬೀತುಪಡಿಸುತ್ತದೆ.ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ರತನ್ ಟಾಟಾ ಒಡೆತನದ ಟಾಟಾ ಸ್ಟೀಲ್ ಸಂಸ್ಥೆಗಳು ಈ ತ್ರೈಮಾಸಿಕ ಅವಧಿಯಲ್ಲಿ ಕ್ರಮವಾಗಿ ರೂ 1,054 ಕೋಟಿ ಮತ್ತು ರೂ 987 ಕೋಟಿಗಳಷ್ಟು ಮುಂಗಡ ತೆರಿಗೆ ಪಾವತಿಸಿವೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಈ ಎರಡೂ ಸಂಸ್ಥೆಗಳು ರೂ770 ಮತ್ತು ರೂ 513 ಕೋಟಿಗಳಷ್ಟು ಮುಂಗಡ ತೆರಿಗೆ ಪಾವತಿಸಿದ್ದವು.
ಬ್ಯಾಂಕ್‌ಗಳ ಸಾಧನೆ: ಪ್ರಮುಖ ಬಹುರಾಷ್ಟ್ರೀಯ ಬ್ಯಾಂಕ್‌ಗಳಾದ ಸಿಟಿಬ್ಯಾಂಕ್ ಮತ್ತು ಡಾಯಿಶ್ ಬ್ಯಾಂಕ್ ಗಮನಾರ್ಹ ಪ್ರಮಾಣ ಎನ್ನಬಹುದಾದ ರೂ400 ಕೋಟಿ ಮತ್ತು ರೂ 170 ಕೋಟಿಗಳಷ್ಟು ಮುಂಗಡ ತೆರಿಗೆ ಪಾವತಿಸಿವೆ.
ಕಳೆದ ವರ್ಷ ಈ ಬ್ಯಾಂಕ್‌ಗಳು ರೂ 150 ಮತ್ತು ರೂ 60 ಕೋಟಿಗಳಷ್ಟು ತೆರಿಗೆ ಪಾವತಿಸಿದ್ದವು.ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಮುಂಗಡ ತೆರಿಗೆಯಲ್ಲಿ (ರೂ 200 ಕೋಟಿ) ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಎಚ್‌ಎಸ್‌ಬಿಸಿ ಕಳೆದ ವರ್ಷದ ರೂ 190 ಕೋಟಿಗೆ ಪ್ರತಿಯಾಗಿ ರೂ 449 ಕೋಟಿ ತೆರಿಗೆ ಪಾವತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.