ADVERTISEMENT

ಮೂಲಸೌಕರ್ಯ ಪ್ರಗತಿ ಕುಸಿತ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ಕಲ್ಲಿದ್ದಲು, ಗಣಿ ಗಾರಿಕೆ, ಉಕ್ಕು, ತೈಲ ಶುದ್ಧೀಕರಣ ಸೇರಿ ದಂತೆ ಎಂಟು ಮೂಲ­ಸೌಕರ್ಯ ವಲಯಗಳ ಉದ್ಯಮಗಳ ಪ್ರಗತಿ ಅಕ್ಟೋಬ ರ್‌ನಲ್ಲಿ ಶೇ 0.6ರಷ್ಟು ಕುಸಿತ ಕಂಡಿದೆ.

ಸೆಪ್ಟೆಂಬರ್‌ನಲ್ಲಿ ಮೂಲಸೌಕರ್ಯದ ವಲಯದ ಉದ್ಯಮಗಳು ಶೇ 8ರಷ್ಟು ದಾಖಲೆ ಪ್ರಗತಿ ಕಂಡಿದ್ದವು. ಈ ಉದ್ಯ­ಮ ಗಳು ದೇಶದ ಒಟ್ಟಾರೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 38ರಷ್ಟು ಕೊಡುಗೆ ನೀಡುತ್ತವೆ.

ನೈಸರ್ಗಿಕ ಅನಿಲ ವಲಯದ ಪ್ರಗತಿ ಅಕ್ಟೋಬರ್‌ನಲ್ಲಿ ಶೇ 13ರಷ್ಟು, ಕಲ್ಲಿದ್ದಲು ತಯಾರಿಕೆ ಶೇ 3.9ರಷ್ಟು, ಕಚ್ಚಾ ತೈಲ ವಲಯ ಶೇ 0.8ರಷ್ಟು, ತೈಲ ಶುದ್ಧೀಕರಣ ಶೇ 4.8ರಷ್ಟು ಕುಸಿತ ಕಂಡಿವೆ.

ಮುಂಬರುವ ತಿಂಗಳುಗಳಲ್ಲಿ  ಇನ್ನಷ್ಟು ಕಳಪೆ ಸಾಧನೆ ದಾಖಲಾಗಬ­ಹುದು ಎಂದು ‘ಕ್ರಿಸಿಲ್‌’ನ ಅರ್ಥಶಾಸ್ತ್ರಜ್ಞ ಡಿ.ಕೆ.ಜೋಶಿ ಅಭಿ ಪ್ರಾಯಪಟ್ಟಿದ್ದಾರೆ.ಅಕ್ಟೋಬರ್‌ನಲ್ಲಿ ರಸಗೊಬ್ಬರ ವಲಯ ಶೇ 4.1ರಷ್ಟು,  ಉಕ್ಕು ಮತ್ತು ಸಿಮೆಂಟ್‌ ಕ್ರಮವಾಗಿ ಶೇ 3.5 ಮತ್ತು ಶೇ ರಷ್ಟು ಪ್ರಗತಿ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.