ADVERTISEMENT

ಮ್ಯೂಚುವಲ್ ಫಂಡ್:ಗರಿಷ್ಠ ನಷ್ಟ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ನವದೆಹಲಿ (ಪಿಟಿಐ): ಕಳೆದ ವರ್ಷ ಮ್ಯೂಚುವಲ್ ಫಂಡ್‌ಗಳ ವಹಿವಾಟು ರೂ. 16 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ. ಮ್ಯೂಚುವಲ್ ಫಂಡ್ ಸಂಘದ (ಎಎಂಎಫ್‌ಐ) ತ್ರೈಮಾಸಿಕ ವರದಿ ಪ್ರಕಾರ, ಎಲ್ಲ ಫಂಡ್‌ಗಳ ಸರಾಸರಿ ಸಂಪತ್ತು ನಿರ್ವಹಣೆಯ (ಎಯುಎಂ) ಒಟ್ಟು ಮೊತ್ತವು ಈಗ ರೂ. 6,87,640 ಕೋಟಿಗಳಷ್ಟು ಆಗಿದೆ.

2011ರ ಜನವರಿಯಿಂದ ಮಾರ್ಚ್ ತಿಂಗಳವರೆಗಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ರೂ.   7,03,680 ಕೋಟಿಗಳಷ್ಟಿದ್ದ `ಎಯುಎಂ~, ವರ್ಷಾಂತ್ಯದ ಹೊತ್ತಿಗೆ  ರೂ. 16,040 ಕೋಟಿಗಳಷ್ಟು ಕಡಿಮೆಯಾಗಿದೆ. ಷೇರುಪೇಟೆಯಲ್ಲಿನ ವಹಿವಾಟು ಕುಸಿದಿರುವುದು ಮತ್ತು ಹೂಡಿಕೆದಾರರು ಹಣ ವಾಪಸ್ ಪಡೆದಿರುವುದರಿಂದ `ಎಯುಎಂ~ ಕಡಿಮೆಯಾಗಿದೆ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಷೇರು ಮತ್ತು ಸಾಲ ಪತ್ರಗಳಲ್ಲಿ ತೊಡಗಿಸುತ್ತವೆ. ಎಚ್‌ಡಿಎಫ್‌ಸಿ, ರಿಲಯನ್ಸ್, ಐಸಿಐಸಿಐ ಪ್ರುಡೆಂಟ್, ಬಿರ್ಲಾ ಸನ್ ಲೈಫ್ ಮತ್ತು ಯುಟಿಐ ಮ್ಯೂಚುವಲ್ ಫಂಡ್‌ಗಳ ಒಟ್ಟಾರೆ ಸಂಪತ್ತು ನಿರ್ವಹಣೆ ಮೊತ್ತವೂ  ರೂ. 37,741 ಕೋಟಿಗಳಷ್ಟು ಕಡಿಮೆ ಆಗಿದೆ.

ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್, ಒಟ್ಟು ರೂ. 88,737 ಕೋಟಿಗಳಷ್ಟು ಸಂಪತ್ತು ನಿರ್ವಹಣೆ ಮೂಲಕ ಮುಂಚೂಣಿಯಲ್ಲಿ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.