ADVERTISEMENT

ರಫ್ತು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 16:55 IST
Last Updated 25 ಫೆಬ್ರುವರಿ 2011, 16:55 IST

ನವದೆಹಲಿ(ಐಎಎನ್‌ಎಸ್): ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಗಳಲ್ಲಿ ದೇಶದ ಒಟ್ಟು ರಫ್ತು ಪ್ರಮಾಣ ಶೇ 29ರಷ್ಟು ಪ್ರಗತಿ ದಾಖಲಿಸಿದ್ದು, 164.7 ದಶಲಕ್ಷಕ್ಕೆ ಏರಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಇದೇ ಗರಿಷ್ಠ ಮಟ್ಟದ ಪ್ರಗತಿ ಮುಂದುವರೆಯಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ.

ದೇಶದ ರಫ್ತು ಪ್ರಮಾಣ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 200 ಶತಕೋಟಿ ಡಾಲರ್   (ರೂ 9,20,000 ಕೋಟಿ) ರಫ್ತು ವಹಿವಾಟು ಗುರಿಯನ್ನು ಸರ್ಕಾರ ಹೊಂದಿದೆ. ಈಗಿನ ಪ್ರಗತಿ ಗಮನಿಸಿದರೆ ಇದು ಉದ್ದೇಶಿತ ಗುರಿಯನ್ನು ದಾಟಲಿದೆ ಎಂದು ಸಚಿವ ಪ್ರಣವ್ ಹೇಳಿದ್ದಾರೆ.

ಇದೇ ಅವಧಿಯಲ್ಲಿ ಆಮದು ಶೇ 19ರಷ್ಟು ಹೆಚ್ಚಿದೆ. 2007ರಿಂದಲೂ ಭಾರತದ ಜತೆ ವಿದೇಶಿ ವಹಿವಾಟಿನಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕ ಪ್ರಸಕ್ತ ಸಾಲಿನಲ್ಲಿ ಮೂರನೆಯ ಸ್ಥಾನಕ್ಕೆ ಇಳಿದಿದೆ. ಸಂಯುಕ್ತ ಅರಬ್ ಒಕ್ಕೂಟ (ಯುಎಇ) ಮೊದಲ ಸ್ಥಾನಕ್ಕೆ ಹಾಗೂ ಚೀನಾ ಎರಡನೆಯ ಸ್ಥಾನಕ್ಕೆ ಬಂದಿವೆ. ಆಮದು ಮತ್ತು ರಫ್ತು ವಹಿವಾಟು ವೃದ್ಧಿಗಾಗಿ ಅಮರಿಕ, ಸಿಂಗಪುರ, ಬ್ರಿಟನ್, ಚೀನಾ ಸೇರಿದಂತೆ 15 ದೇಶಗಳ ಜತೆ ಭಾರತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.