ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಓಯೊ ಬುಕಿಂಗ್‌ ಖಾತರಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 19:30 IST
Last Updated 2 ಡಿಸೆಂಬರ್ 2017, 19:30 IST

ಬೆಂಗಳೂರು: ಕೊಠಡಿ ಕಾದಿರಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಓಯೊ (OYO) -  ಈಗ ವಾಟ್ಸ್ ಆ್ಯಪ್ ಮೂಲಕ ಸೇವೆ ಒದಗಿಸಲು ಮುಂದಾಗಿದೆ.

‘ಓಯೊ’ದಲ್ಲಿ ಕೋಣೆಗಳನ್ನು ಕಾಯ್ದಿರಿಸುವವರು ಈಗ ತಮ್ಮ ಬುಕಿಂಗ್ ಖಾತರಿಪಡಿಸಿಕೊಳ್ಳಲು ಮತ್ತು ರದ್ದುಪಡಿಸುವ ಸೌಲಭ್ಯವನ್ನು ವಾಟ್ಸ್‌ಆಪ್‌ನಲ್ಲಿಯೇ ಪಡೆಯಲಿದ್ದಾರೆ. ಭಾರತ, ಮಲೇಷ್ಯಾ ಮತ್ತು ನೇಪಾಳದ 230ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಗ್ರಾಹಕರು ಈ ಅ್ಯಪ್ ಮೂಲಕವೂ ಕೊಠಡಿ ಕಾದಿರಿಸಬಹುದು. ವಾಟ್ಸ್ಆ್ಯಪ್ ಸಂದೇಶ ಕಳಿಸುವಲ್ಲಿ ಸಂಪರ್ಕ ಕೊರತೆ ಎದುರಾದರೆ, ಎಸ್‍ಎಂಎಸ್ ಮೂಲಕವೂ ಮಾಹಿತಿ ರವಾನಿಸಲಾಗುವುದು. ವಾಟ್ಸ್‌ಆ್ಯಪ್ ಬಳಕೆ ಮಾಡದ ಗ್ರಾಹಕರಿಗೆ ಎಸ್‍ಎಂಎಸ್ ಮತ್ತು ಇ-ಮೇಲ್ ಮೂಲಕವೇ ಮಾಹಿತಿ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT