ಮುಂಬೈ (ಪಿಟಿಐ): ದೇಶದ ವಿದೇಶಿ ವಿನಿಮಯ ಸಂಗ್ರಹವು ಮಾರ್ಚ್ 7ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ 109 ಕೋಟಿ ಡಾಲರ್‌ಗಳಷ್ಟು ಹೆಚ್ಚಿದ್ದು (₨6758 ಕೋಟಿ) 29545 ಕೋಟಿ ಡಾಲರ್‌ಗಳಿಗೆ (₨18.31 ಲಕ್ಷ ಕೋಟಿಗೆ) ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಹಿಂದಿನ ವಾರಾಂತ್ಯದಲ್ಲಿ ವಿದೇಶಿ ವಿನಿಮಯ ಸಂಗ್ರಹ 29436 ಕೋಟಿ ಡಾಲರ್ (₨18.25 ಲಕ್ಷ ಕೋಟಿ) ಗಳಷ್ಟಿತ್ತು. ‘ಆರ್‌ಬಿಐ’ ಬಳಿ 2097 ಕೋಟಿ ಡಾಲರ್ ಮೌಲ್ಯದ (₨1.30 ಲಕ್ಷ ಕೋಟಿ) ಚಿನ್ನದ ಮೀಸಲು ಇದ್ದು, ಕಳೆದ ವಾರಾಂತ್ಯಕ್ಕೆ ಹೋಲಿಸಿದರೆ ಮೌಲ್ಯದಲ್ಲಿ ವ್ಯತ್ಯಾಸವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.