ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 105 ವಸಂತಗಳನ್ನು ಪೂರೈಸಿರುವ `ದಿ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್~ ರಾಜ್ಯದ 275 ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿಯೇ `ಮುಂಚೂಣಿ ನೆಲೆ~ಯ ಬ್ಯಾಂಕ್ ಎನಿಸಿಕೊಂಡಿದೆ. ಅಲ್ಲದೆ, ಭಾರತದ `ಪ್ರಪ್ರಥಮ~ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಮೈಲಿಗಲ್ಲೂ ಇದೆ.
2005ರಲ್ಲಿ ಪತ್ತಿನ ಸಹಕಾರಿ ಸಂಘವಾಗಿ ಆರಂಭಗೊಂಡಿತು. ಆರಂಭದಲ್ಲಿ 150 ಸದಸ್ಯರಿಂದ ರೂ. 2727 ಷೇರು ಮೊಬಲಗು, ರೂ. 2265 ಠೇವಣಿ ಹಾಗೂ ರೂ. 4036 ಮುಂಗಡ ನೀಡುವುದರೊಂದಿಗೆ ಈ ಬ್ಯಾಂಕ್ ವಹಿವಾಟು ಆರಂಭಿಸಿತು. ನಂತರ 2007ರಲ್ಲಿ ಸಹಕಾರಿ ಧುರೀಣ ದಿ. ರಾಮಸ್ವಾಮಯ್ಯ ಅವರ ಸಾರಥ್ಯದಲ್ಲಿ ಸಂಸ್ಥೆ `ದಿ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್~ ಎಂದು ಪರಿವರ್ತನೆಗೊಂಡಿತು.
ಬ್ಯಾಂಕ್ 1932ರಲ್ಲಿ ರಜತ, 1957ರಲ್ಲಿ ಸುವರ್ಣ, 1982ರಲ್ಲಿ ಪ್ಲಾಟಿನಂ ಹಾಗೂ 2007ರಲ್ಲಿ `ಶತಮಾನೋತ್ಸವ~ ಆಚರಿಸಿಕೊಂಡಿರುವುದು ಅದರ `ಹಿರಿತನ~ಕ್ಕೆ ಸಾಕ್ಷಿ. ಸಹಕಾರಿ ಬ್ಯಾಂಕೊಂದು 105 ವಸಂತಗಳನ್ನೂ ದಾಟಿ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವುದು ದೇಶದ ಸಹಕಾರಿ ಬ್ಯಾಂಕಿಂಗ್ ಇತಿಹಾಸದಲ್ಲಿ ಅಪರೂಪ.
ಬ್ಯಾಂಕ್ ಚಾಮರಾಜಪೇಟೆಯಲ್ಲಿ ಸ್ವಂತ ಕಟ್ಟಡದಲ್ಲಿ ಮುಖ್ಯ ಕಚೇರಿ ಇದೆ.
ಬೆಂಗಳೂರಿನಲ್ಲಿಯೇ 13 ಶಾಖೆಗಳಿದ್ದು, ಇಂದಿರಾನಗರ ಶಾಖೆ ಸಹ ಸ್ವಂತ ಕಟ್ಟಡದಲ್ಲಿದೆ. ಜೂನ್ 10ರಂದು ಎಚ್.ಆರ್.ಬಿ.ಆರ್. ಲೇಔಟ್‌ನಲ್ಲಿ ನೂತನ ಶಾಖೆ ಆರಂಭಗೊಂಡಿದ್ದು, ಸದ್ಯದಲ್ಲಿಯೇ ಕೃಷ್ಣರಾಜಪುರದಲ್ಲೊಂದು ಶಾಖೆ ಬರಲಿದೆ. ಎಲ್ಲ ಶಾಖೆಗಳೂ ಗಣಕೀಕೃತ-ಹವಾನಿಯಂತ್ರಣ ಸೇರಿದಂತೆ ಆಧುನಿಕ ಸೌಲಭ್ಯಗಳಿಂದ ಕೂಡಿವೆ.
ಬ್ಯಾಂಕ್-ಗ್ರಾಹಕ ಸಂಬಂಧ
ಕಳೆದ ಐದು ವರ್ಷಗಳಿಂದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಬ್ಯಾಂಕ್ ಮುಖ್ಯ ಕಚೇರಿ ಮುಂಭಾಗ ಸಮಾರಂಭ ಏರ್ಪಡಿಸಿ, ಉತ್ತಮ ಠೇವಣಿದಾರರು ಮತ್ತು ಸಾಲ ಮರುಪಾವತಿ ಮಾಡಿದವರಿಗೆ ಸನ್ಮಾನಿಸಲಾಗುತ್ತಿದೆ. ಬ್ಯಾಂಕ್‌ನ ಸಿಬ್ಬಂದಿ ವರ್ಗದ ಪ್ರತಿಭಾವಂತ ಮಕ್ಕಳಿಗೆ ರೂ. 1,000 ನಗದು, ಬೆಳ್ಳಿ ನಾಣ್ಯ ನೀಡಲಾಗುತ್ತಿದೆ. ಈ ಯೋಜನೆ ರುವಾರಿ ಹಿಂದಿನ ಅಧ್ಯಕ್ಷ ಆವಲಹಳ್ಳಿ ಚಂದ್ರಪ್ಪ~ ಎನ್ನುತ್ತಾರೆ ಹಾಲಿ ಅಧ್ಯಕ್ಷ ದೇವರಾಜ್.
ಹಿರಿಮೆ
ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಈ ಬ್ಯಾಂಕ್‌ನ ಮಾಜಿ ಅಧ್ಯಕ್ಷರು. 1926, 1927 ಮತ್ತು 1928ರಲ್ಲಿ ಮೈಸೂರು ಸಂಸ್ಥಾನದಿಂದ `ಉತ್ತಮ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಶಸ್ತಿ. 2002, 2004 ಹಾಗೂ 2008ರಲ್ಲಿ ರಾಜ್ಯ ಸರ್ಕಾರದಿಂದ `ಉತ್ತಮ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಶಸ್ತಿ. ಅರ್ಬನ್ ಬ್ಯಾಂಕ್ ಫೆಡರೇಷನ್‌ನಿಂದ 2012ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಘೋಷಣೆ.
ವಿಶೇಷ ಸವಲತ್ತು
* ಶತಮಾನೋತ್ಸವ ಮಾಸಿಕ ಆದಾಯ ಠೇವಣಿಗೆ ಯಾವುದೇ ಕಡಿತವಿಲ್ಲದೆ ಬಡ್ಡಿ ವಿತರಣೆ
* ಅವಧಿಗೆ ಮುನ್ನ ಠೇವಣಿ ವಾಪಸ್ ಪಡೆದರೂ ದಂಡವಿಲ್ಲ
* ಸಕಾಲಿಕ ಸಾಲ ಮರುಪಾವತಿಗೆ ಬಡ್ಡಿ ರಿಯಾಯಿತಿ
ಸಾಮಾಜಿಕ ಕಾರ್ಯಕ್ರಮ
* ಮೈಸೂರು ಜಿಲ್ಲೆ ಚೀರನಹಳ್ಳಿ ಕುಡಿಯುವ ನೀರಿನ ಯೋಜನೆಗೆ ರೂ. 60,000 ನೆರವು
* ಸಹಕಾರಿ ತರಬೇತಿ ಮಹಾವಿದ್ಯಾಲಯದ ಎಂ.ಬಿ.ಎ. ಕೊಠಡಿ ನವೀಕರಣಕ್ಕೆ ರೂ. 50,000
* ಕಿದ್ವಾಯಿ ಗ್ರಂಥಿ ಸಂಸ್ಥೆಗೆ ರೂ. ಒಂದು ಲಕ್ಷ
* ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್ ಮಹಾಮಂಡಳಿಗೆ ರೂ. 2 ಲಕ್ಷ
* ಉತ್ತರ ಕರ್ನಾಟಕ ನೆರೆ ಹಾವಳಿಗೆ ರೂ. 10 ಲಕ್ಷ
ಮಾರ್ಚ್ 2012-ಪ್ರಗತಿ (ಕೋಟಿ ರೂ)
ಷೇರು ಬಂಡವಾಳ 35.02
ಆಪದ್ಧನ-ಇತರೆ ನಿಧಿ 63.27
ಠೇವಣಿ 736.10
ದುಡಿಯುವ ಬಂಡವಾಳ 857.67
ಸಾಲ ಮತ್ತು ಮುಂಗಡ 526.50
ಹೂಡಿಕೆ 299.85
ನಿವ್ವಳ ಲಾಭ 10.23
ಅನುತ್ಪಾದಕ ಆಸ್ತಿ 0
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.