ADVERTISEMENT

ಸಕಾರಾತ್ಮಕ ವಹಿವಾಟು ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ):  ಡಿಸೆಂಬರ್‌ 5 ರಿಂದ ಆರಂ­ಭ­ವಾಗಲಿರುವ ಚಳಿಗಾ­ಲದ ಅಧಿ­ವೇಶನ ಮತ್ತು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸಕಾರಾತ್ಮಕ ವಹಿವಾಟು ದಾಖಲಿ­ಸಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ನವೆಂಬರ್‌ನಲ್ಲಿನ ವಾಹನ ಮಾರಾಟ ಅಂಕಿ ಅಂಶಗಳು ಡಿ. 2­ರಂದು ಪ್ರಕಟ­ಗೊಳ್ಳಲಿವೆ. ಜತೆಗೆ ಡಾಲರ್‌ ವಿರುದ್ಧ ಏರಿಳಿತ ಕಾಣುತ್ತಿ­ರುವ ರೂಪಾಯಿ ವಿನಿ­ಮಯ ಮೌಲ್ಯ ಕೂಡ ವಿದೇಶಿ ಸಾಂಸ್ಥಿಕ ಹೂಡಿಕೆ(ಎಫ್‌ಐಐ) ನಿರ್ಧರಿ ಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

2ನೇ ತ್ರೈಮಾಸಿಕದಲ್ಲಿ ‘ಜಿಡಿಪಿ’ ಅಲ್ಪ ಪ್ರಗತಿ ಕಂಡಿರುವುದು ಸಹ ಪೇಟೆಯಲ್ಲಿ ಸಕಾರಾತ್ಮಕ ವಾತಾವರಣ ಮೂಡಿಸಿದೆ ಎಂದು ರೆಲಿಗೇರ್‌ ಸೆಕ್ಯುರಿ ಟೀಸ್‌ ಹೇಳಿದೆ.  ಕಳೆದ ವಾರ ಸೂಚ್ಯಂಕ ಒಟ್ಟಾರೆ 574 ಅಂಶಗಳಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT