ADVERTISEMENT

ಸುಕ್ಕು ಮೂಡುವ ಹೊತ್ತು: ಲಿಫ್ಟ್ ಕರಾದೆ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ನಿಮಗೆ ವಯಸ್ಸಾಗಿದೆ ಎನಿಸುತ್ತಿದೆಯೇ? ಕಣ್ಣ ಕೆಳಗೆ ಚಿಂತೆಯ ಸುಳಿಗಳು ಗೆರೆ ಬಿಟ್ಟು ಹೋಗಿರಬೇಕು. ನಕ್ಕರೂ ಗುಳಿ ಕೆನ್ನೆಯಲ್ಲೊಂದು ಮಿಂಚಿನ ಅವಶೇಷದಂತೆ ಸುಕ್ಕುಗಟ್ಟುತ್ತಿರಬೇಕು. ಕೆನ್ನೆಯೂ ಇಳಿಬಿದ್ದಂತೆ.

ಛೆ... ಮನಸಿಗಿನ್ನೂ ಇಪ್ಪತ್ತೈದು. ಮುಖಕ್ಕೆ ಮಾತ್ರ ಐವತ್ತೆರಡೆ? ವಯಸ್ಸು ಮಾಗಿದಂತೆ ತ್ವಚೆಯೂ ಮಾಗುತ್ತದೆ. ತ್ವಚೆಯೊಳಗಿನ ನೀರಿನಂಶ ಕಡಿಮೆಯಾಗುತ್ತದೆ. ಕಾಂತಿ ಕ್ಷೀಣಗೊಳ್ಳುತ್ತದೆ. ಸುಕ್ಕುಗಟ್ಟುತ್ತದೆ. 

 ಸೌಂದರ್ಯ ತಜ್ಞರ ಬಳಿ ಇವಕ್ಕೆ ಸಾಕಷ್ಟು ಉತ್ತರಗಳಿವೆ. ನಿಗದಿತ ಸಮಯದಲ್ಲಿ ನಿಯಮಿತವಾಗಿ ಫೇಷಿಯಲ್ ಮಾಡಿಸಿಕೊಳ್ಳುವುದರಿಂದ ನಿಮ್ಮ ತ್ವಚೆಯ ಆರೈಕೆ ಆಗುತ್ತದೆ. 

 ತ್ವಚೆಯ ಸ್ವಾಸ್ಥ್ಯ ಕಾಪಾಡುತ್ತಲೇ ಶಸ್ತ್ರಚಿಕಿತ್ಸೆ ರಹಿತ ಫೇಸ್ ಲಿಫ್ಟಿಂಗ್ ಸಹ ಮಾಡಬಹುದು. ಒಂದರಿಂದ 6 ಸಿಟ್ಟಿಂಗ್‌ಗಳಲ್ಲಿ ನಿಮ್ಮ ವಯಸ್ಸು 6-8 ವರ್ಷಗಳಷ್ಟು ಸಣ್ಣವರಾಗಿ ಕಾಣಿಸಿಕೊಳ್ಳಬಹುದು.

ಚರ್ಮದ ವಯಸ್ಸಿನಲ್ಲಿ ಇಳಿಕೆಯಾಗುವುದಿಲ್ಲ. ಆದರೆ ಚರ್ಮದ ಸ್ವಾಸ್ಥ್ಯಕ್ಕೆ ಬೇಕಿರುವ ನೀರಿನಂಶವನ್ನು ಪೂರೈಸಲಾಗುತ್ತದೆ. ಒಮ್ಮೆ ಈ ಫೇಸ್ ಲಿಫ್ಟಿಂಗ್‌ಗೆ ನೀವು ಸಿದ್ಧರಾದರೆ ಒಂದು ವರ್ಷದವರೆಗೂ ನಿಶ್ಚಿಂತರಾಗಿರಬಹುದು.

ಆದರೆ ಒಂದು ವರ್ಷದಷ್ಟು ಸಮಯ ಇಲ್ಲದಿದ್ದಲ್ಲಿ, ತುರ್ತಾಗಿ ಯೌವ್ವನ ಭರಿತರಂತೆ ಕಾಣಬೇಕಿದ್ದರೆ ನೀವು ಎಚ್‌ಎಎಲ್‌ನಲ್ಲಿರುವ `ಎಸ್ಸೆನ್ಷಿಯಲ್~ಗೆ ಒಮ್ಮೆ ಭೇಟಿ ನೀಡಬೇಕು.
ಅಲ್ಲಿ ತ್ವಚೆಯ ತಜ್ಞೆ ಡಾ. ಚಾರು ಶರ್ಮಾ `ಇನ್‌ಸ್ಟಂಟ್ ಫೇಸ್‌ಲಿಫ್ಟ್~ ಚಿಕಿತ್ಸೆಯನ್ನು ಆರಂಭಿಸಿದ್ದಾರೆ

ಫೇಸ್ ಲಿಫ್ಟ್‌ಗಾಗಿ ಕೇವಲ 8-10 ನಿಮಿಷ ಸಾಕು. ಆದರೆ ತ್ವಚೆಯ ಆರೈಕೆ ಹಾಗೂ ಅಕ್ಕರೆಯ ಪೋಷಣೆಗಾಗಿ ಒಂದು ಗಂಟೆಯ ಅವಧಿ ಬೇಕು ಎನ್ನುತ್ತಾರೆ ಚಾರು ಶರ್ಮಾ.

ಮೊದಲು ಮುಖದ ಕ್ಲೀನಿಂಗ್ ಮಾಡಲಾಗುತ್ತದೆ. ನಂತರ ಮಸಾಜ್. ಮಸಾಜ್ ಮುಖದೊಂದಿಗೆ ಮನಸಿಗೂ ಆಹ್ಲಾದಕರ ಅನುಭವ ನೀಡುತ್ತದೆ. ಉಲ್ಲಸಿತ ಮನಸಿನಿಂದಲೇ ಮುಖ ಚಂದ ಕಾಣುತ್ತದೆ. ಅದಕ್ಕಾಗಿ ಈ 20-25 ನಿಮಿಷಗಳ ಮಸಾಜ್ ನೀಡಲಾಗುತ್ತದೆ. ನಂತರ ಫೇಸ್ ಲಿಫ್ಟ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ವಿವರಿಸುತ್ತಾರೆ ಅವರು.

ಈ ಇನ್‌ಸ್ಟಂಟ್ ಫೇಸ್‌ಲಿಫ್ಟ್‌ಗೆ ಒಳಗಾದವರಿಗೆ 12 ಗಂಟೆಗಳಷ್ಟು ಕಾಲ ಯೌವ್ವನ ಮರಳುತ್ತದೆ ಎನ್ನುತ್ತಾರೆ ಚಾರು ಶರ್ಮಾ.

24 ವರ್ಷದೊಳಗಿನ ಯುವಕ-ಯುವತಿಯರಿಗೆ ಈ ಚಿಕಿತ್ಸೆಯ ಅಗತ್ಯವಿಲ್ಲ. ಅವರ ತ್ವಚೆಯಲ್ಲಿ ಸಾಕಷ್ಟು ತೇವಾಂಶವಿರುತ್ತದೆ. ಇನ್ನುಳಿದ ಸಮಸ್ಯೆಗಳಿಗಾಗಿ ಕೇವಲ ಸಲಹೆ-ಸೂಚನೆಗಳನ್ನು ನೀಡಲಾಗುತ್ತದೆ. ಅಗತ್ಯವಿದ್ದವರಿಗೆ ಲೇಪನ ಸೋಪುಗಳ ವಿವರ ನೀಡಲಾಗುತ್ತದೆ ಎನ್ನುತ್ತಾರೆ ಅವರು.

ಬೇಡದ ಮಚ್ಚೆ, ಗಾಯದ ಗುರುತು, ಮೊಡವೆ ಮುಂತಾದವುಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ತ್ವಚೆ ಹೇಗೆ ಕಾಣಬೇಕು ಎಂಬುದಕ್ಕಿಂತ ಆರೋಗ್ಯವಂತ ತ್ವಚೆ ಹೇಗಿರಬೇಕು ಎಂಬುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಎಲ್ಲ ಬಗೆಯ ಚರ್ಮಗಳಿಗಾಗಿಯೂ ಇನ್‌ಸ್ಟಂಟ್‌ಫೇಸ್ ಲಿಫ್ಟ್ ಚಿಕಿತ್ಸೆಯು ಸೂಕ್ತವಾಗಿದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಮೂಲಕ ಶಾಶ್ವತವಾಗಿ ಮುಖದ ಆಕಾರವನ್ನು ಬದಲಿಸಿಕೊಳ್ಳಬಹುದು. ಪ್ರಿಯಾಂಕಾ ಚೋಪ್ರಾಳಂತೆ, ಕೋಯ್ನಾ ಮಿತ್ರಾಳಂತೆ. ಆದರೆ ಈ ಫೇಸ್‌ಲಿಫ್ಟಿಂಗ್‌ನ ಒಂದು ಅನುಕೂಲವೆಂದರೆ ಕಾಲಕ್ಕೆ ತಕ್ಕಂತೆ ನಿಮ್ಮ ಲುಕ್ ಅನ್ನು ಬದಲಿಸುತ್ತ ಹೋಗುವ ಅವಕಾಶವಿರುತ್ತದೆ. ಇದೇ ಶಾಶ್ವತ ಶಸ್ತ್ರಚಿಕಿತ್ಸೆಗೂ, ಫೇಸ್‌ಲಿಫ್ಟ್‌ಗೂ ಇರುವ ವ್ಯತ್ಯಾಸ.

ಪ್ರತಿಯೊಬ್ಬ ವ್ಯಕ್ತಿಯ ತ್ವಚೆಗೆ ಅನುಗುಣವಾಗಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದು ವಿವರಿಸುತ್ತಾರೆ ಡಾ.ಚಾರು ಶರ್ಮಾ.

ವೈದ್ಯರಾದರೂ ಆಸ್ಪತ್ರೆಯ ಭಾವ ನೀಡದಂಥ ವಾತಾವರಣವನ್ನು ಎಸೆನ್ಷಿಯಲ್ ಕ್ಲಿನಿಕ್‌ನಲ್ಲಿ ಸೃಷ್ಟಿಸಿದ್ದಾರೆ.

ತೆಳುವರ್ಣದ ಗೋಡೆಗಳು, ಇನಿಧ್ವನಿಯ ಸಂಗೀತ, ಸುಗಂಧ ದ್ರವ್ಯಗಳ ಸುಮಧರ ಅನುಭವ ಇಲ್ಲಿಗೆ ಕಾಲಿರಿಸಿದೊಡನೆ ಅನುಭವಕ್ಕೆ ದೊರೆಯುತ್ತದೆ.

ಕೆಲವೊಮ್ಮೆ ತ್ವಚೆಯ ಸಮಸ್ಯೆಗಳಿಗೆ ದೈಹಿಕ ಅನಾರೋಗ್ಯ, ಮಾನಸಿಕ ಸ್ಥಿತಿಯೂ ಕಾರಣವಾಗಿರುತ್ತದೆ. ಆಗ ಸೂಕ್ತ ವೈದ್ಯರನ್ನು ಕಾಣುವ ಸಲಹೆಯನ್ನೂ ನೀಡಲಾಗುತ್ತದೆ ಸ್ವಾಸ್ಥ್ಯದೊಡನೆ ಸೌಂದರ್ಯವನ್ನು ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ ಡಾ. ಚಾರು.

ಹೆಚ್ಚಿನ ಮಾಹಿತಿಗೆ ಅಥವಾ ನೋಂದಣಿಗೆ ಸಂಪರ್ಕಿಸಿ: 4090 0760, 40900762
ವಿಳಾಸ: ನಂ. 3615/ಎ, 6ನೇ ಕ್ರಾಸ್, ಎಚ್‌ಎಎಲ್ 2ನೇ ಹಂತ, ಬೆಂಗಳೂರು.   

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.