ADVERTISEMENT

ಸ್ವಿಸ್ ಬ್ಯಾಂಕ್: ಏಪ್ರಿಲ್ 1ರಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಪರಿಷ್ಕೃತ ತೆರಿಗೆ ಒಪ್ಪಂದ  ಜಾರಿಗೊಳಿಸಲು ಸ್ವಿಟ್ಜರ್‌ಲೆಂಡ್ ಬದ್ಧವಾಗಿದ್ದು, ಒಮ್ಮೆ ಇದು ಜಾರಿಗೊಂಡರೆ, ಏಪ್ರಿಲ್ 1ರಿಂದ ದೇಶಕ್ಕೆ ಸ್ವಿಟ್ಜರ್‌ಲೆಂಡ್‌ನಲ್ಲಿರುವ ಭಾರತೀಯ ಬ್ಯಾಂಕ್ ಖಾತೆಗಳ ಮಾಹಿತಿಗಳು ಲಭಿಸಲಿವೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಎಸ್.ಎಸ್ ಪಳನಿಮಾಣಿಕ್ಯಂ ರಾಜ್ಯಸಭೆಗೆ ತಿಳಿಸಿದ್ದಾರೆ.

ಭಾರತ ಮತ್ತು ಸ್ವಿಟ್ಜರ್‌ಲೆಂಡ್ 2010, ಆಗಸ್ಟ್ 30ರಲ್ಲಿ  ಎರಡೂ ಕಡೆಗಳಿಂದ ತೆರಿಗೆ ವಿಧಿಸುವುದನ್ನು ತಪ್ಪಿಸುವ ಒಪ್ಪಂದಕ್ಕೆ (ಡಿಟಿಎಎ) ಸಹಿ ಹಾಕಿದ್ದವು. ಸ್ವಿಟ್ಜರ್‌ಲೆಂಡ್ ಸಂಸತ್ತು ಜೂನ್ ತಿಂಗಳಲ್ಲಿ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿದ್ದು, ಜಾರಿಗೆ ಕೆಲವು  ಆಂತರಿಕ ಅನುಮೋದನೆಗಳು ಮಾತ್ರ ಬಾಕಿ ಉಳಿದಿವೆ ಎಂದು ಹೇಳಿದ್ದಾರೆ.
 
ಈ ಪರಿಷ್ಕೃತ ತೆರಿಗೆ ಒಪ್ಪಂದವು ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಿಟ್ಜರ್‌ಲೆಂಡ್‌ನಿಂದ ಬ್ಯಾಂಕಿಂಗ್ ಮಾಹಿತಿಗಳನ್ನು ಪಡೆದುಕೊಳ್ಳಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.