ನವದೆಹಲಿ (ಪಿಟಿಐ): ಪ್ರಸಕ್ತ ಆರ್ಥಿಕ ವರ್ಷದಲ್ಲಿ `ಡಬ್ಲ್ಯುಪಿಐ~ ದರ ಶೇ 8ಕ್ಕಿಂತಲೂ ಗರಿಷ್ಠ ಮಟ್ಟದಲ್ಲಿ ಇರಲಿದ್ದು, ಮತ್ತೊಮ್ಮೆ ಆಹಾರ ಹಣದುಬ್ಬರ ಹೆಚ್ಚುವ ಸಾಧ್ಯತೆ ಇದೆ. ಮುಂಗಾರು ಚೇತರಿಸಿಕೊಳ್ಳದಿದ್ದರೆ ದೇಶದ ವಿತ್ತೀಯ ಕೊರತೆ ಅಂತರವು ಒಟ್ಟು ಆಂತರಿಕ ಉತ್ಪನ್ನದ ಶೇ 6.2ರಷ್ಟಾಗಲಿದೆ ಎಂದೂ `ಕ್ರಿಸಿಲ್~ ಎಚ್ಚರಿಸಿದೆ.
ರಸಗೊಬ್ಬರ ಮತ್ತು ತೈಲ ಸಬ್ಸಿಡಿ ಹೆಚ್ಚಳದಿಂದ ವಿತ್ತೀಯ ಕೊರತೆ ಅಂತರ ಹೆಚ್ಚುತ್ತಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಈ ಅಂತರವು ್ಙ1.9 ಲಕ್ಷ ಕೋಟಿಗಳಷ್ಟು ಹೆಚ್ಚಿದೆ ಎಂದು `ಕ್ರಿಸಿಲ್~ ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.