ADVERTISEMENT

ಹಾಲ್‌ಮಾರ್ಕ್: ಒಂಬತ್ತು ಸಾವಿರ ಹೊಸ ಪರವಾನಗಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

ನವದೆಹಲಿ (ಪಿಟಿಐ): ಚಿನ್ನಾಭರಣಗಳಿಗೆ `ಹಾಲ್‌ಮಾರ್ಕ್~ ಗುರುತು  ಕಡ್ಡಾಯಗೊಳಿಸಿದ ನಂತರ ಇದುವರೆಗೆ 9 ಸಾವಿರ `ಹಾಲ್‌ಮಾರ್ಕ್~ ಪರವಾನಗಿ ವಿತರಿಸಲಾಗಿದೆ ಎಂದು ಭಾರತೀಯ ಮಾನಕ ಮಂಡಳಿ (ಬಿಐಎಸ್) ಹೇಳಿದೆ.

ಕಳೆದ ಡಿಸೆಂಬರ್ 31ರವರೆಗೆ 9005 ಚಿನ್ನಾಭರಣ ಹಾಲ್‌ಮಾರ್ಕ್ ಮತ್ತು 528 ಬೆಳ್ಳಿಯ ಹಾಲ್‌ಮಾರ್ಕ್ ಪರವಾನಗಿ ನೀಡಲಾಗಿದೆ ಎಂದು `ಬಿಐಎಸ್~ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ರಮ ಮತ್ತು ನಕಲಿ ಚಿನ್ನಾಭರಣ ವಹಿವಾಟು ತಡೆಯಲು ಸರ್ಕಾರ ಕಳೆದ ತಿಂಗಳು `ಹಾಲ್‌ಮಾರ್ಕ್~ ಗುರುತು ಹಾಕುವುದನ್ನು ಕಡ್ಡಾಯಗೊಳಿಸಿತ್ತು.

ಸದ್ಯ ದೇಶದಲ್ಲಿ 170 ಹಾಲ್    ಮಾರ್ಕ್ ಗುರುತು ನೀಡುವ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಈ ಕುರಿತು ಜಾಗೃತಿ ನೀಡುವ ಕಾರ್ಯಕ್ರಮವನ್ನೂ `ಬಿಐಎಸ್~ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.