ಮುಂಬೈ (ಪಿಟಿಐ): ದೇಶದಾದ್ಯಂತ ಇರುವ ಒಟ್ಟು `ಎಟಿಎಂ~ಗಳ ಸಂಖ್ಯೆ ಅಕ್ಟೋಬರ್ ಅಂತ್ಯಕ್ಕೆ 1ಲಕ್ಷದ ಗಡಿ ದಾಟಿದೆ ಎಂದು ರಾಷ್ಟ್ರೀಯ ಪಾವತಿ ಸಂಸ್ಥೆ (ಎನ್‌ಪಿಸಿಐ) ಹೇಳಿದೆ.
ಸದ್ಯ ದೇಶದಲ್ಲಿ 1,04,500 `ಎಟಿಎಂ~ಗಳಿವೆ. (10 ಲಕ್ಷ ಜನರಿಗೆ 80 `ಎಟಿಎಂ~ನಂತೆ ) ಇದರಲ್ಲಿ ಸ್ಟೇಟ್ ಬ್ಯಾಂಕ್ ಸಮೂಹ (ಎಸ್‌ಬಿಐ) 61,500 `ಎಟಿಎಂ~ ಹೊಂದಿದ್ದು, ಶೇ 59ರಷ್ಟು ಪಾಲು ಹೊಂದಿದೆ.
ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳು ದೇಶದಲ್ಲಿ ಒಟ್ಟು 41,800 (ಶೇ 40), ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು 1,150 (ಶೇ 1) `ಎಟಿಎಂ~ ಹೊಂದಿವೆ. ಮುಂದಿನ 2 ವರ್ಷಗಳಲ್ಲಿ ಹೆಚ್ಚುವರಿಯಾಗಿ ಇನ್ನೂ 1 ಲಕ್ಷ `ಎಟಿಎಂ~ ಸ್ಥಾಪಿಸುವ ಯೋಜನೆ ಬ್ಯಾಂಕುಗಳ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.