ADVERTISEMENT

₹ 30 ಸಾವಿರ ಕೋಟಿ ವಸೂಲಿ: ಎಸ್‌ಬಿಐ

ಪಿಟಿಐ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
₹ 30 ಸಾವಿರ ಕೋಟಿ ವಸೂಲಿ: ಎಸ್‌ಬಿಐ
₹ 30 ಸಾವಿರ ಕೋಟಿ ವಸೂಲಿ: ಎಸ್‌ಬಿಐ   

ಕೋಲ್ಕತ್ತ: ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯ (ಐಬಿಸಿ) ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 30 ಸಾವಿರ ಕೋಟಿ ಸಾಲ ವಸೂಲಿ ಮಾಡುವ ನಿರೀಕ್ಷೆಯನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ಹೊಂದಿದೆ.

ದೊಡ್ಡ ಮೊತ್ತದ ವಸೂಲಾಗದ ಸಾಲಗಳನ್ನು (ಎನ್‌ಪಿಎ) ಕಾಲಮಿತಿ ಒಳಗೆ ಪರಿಹರಿಸಬೇಕು. ಹೀಗೆ ಮಾಡಲು ಸಾಧ್ಯವಾಗದಿದ್ದರೆ ದಿವಾಳಿ ಸಂಹಿತೆಯಡಿ ಸಾಲ ವಸೂಲಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಆದೇಶ ಹೊರಡಿಸಿದೆ. ಅದರಂತೆ ಎಸ್‌ಬಿಐ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಿದೆ.

‘ದೇಶದಲ್ಲಿ ನಡೆಯುತ್ತಿರುವ ಕೆಲವು ಪ್ರಮುಖ ಸ್ವಾಧೀನ ಒಪ್ಪಂದಗಳಿಂದಾಗಿ ಸಾಲ ವಸೂಲಿ ಸಾಧ್ಯವಾಗುತ್ತಿದೆ. ಭೂಷಣ್‌ ಸ್ಟೀಲ್ ಮತ್ತು ಟಾಟಾ ಸ್ಟೀಲ್‌ ಒಪ್ಪಂದದಿಂದ ಬ್ಯಾಂಕ್‌ ₹ 8,500 ಕೋಟಿ ವಸೂಲಿ ಮಾಡಲಾಗಿದೆ. ಅಂತೆಯೇ ಎಲೆಕ್ಟ್ರೋಸ್ಟೀಲ್‌–ವೇದಾಂತ ಒಪ್ಪಂದದಿಂದ ₹ 6 ಸಾವಿರ ಕೋಟಿ ವಸೂಲಿಯಾಗುವ ನಿರೀಕ್ಷೆ ಇದೆ’ ಎಂದು ಎಸ್‌ಬಿಐನ ಉಪವ್ಯವಸ್ಥಾಪಕ ನಿರ್ದೇಶಕ ಪಲ್ಲವ್‌ ಮೊಹಾಪಾತ್ರಾ ತಿಳಿಸಿದ್ದಾರೆ.

ADVERTISEMENT

‘ಯಾವ ವಲಯದಿಂದ ಎಷ್ಟು ಸಾಲ ವಸೂಲಿಯಾಗಬೇಕಿದೆ ಎನ್ನುವುದನ್ನು ಗುರಿತಿಸಲಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ವಸೂಲಿಯಾಗುವ ನಿರೀಕ್ಷೆ ಇಲ್ಲ’ ಎಂದಿದ್ದಾರೆ.

ಬ್ಯಾಂಕ್‌ನ ವಸೂಲಿಯಾಗದ ಸಾಲದ ಮೊತ್ತ ₹ 2.20 ಲಕ್ಷ ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.