ADVERTISEMENT

ಎಕ್ಸ್‌ಟ್ರಾಮಾರ್ಕ್ಸ್‌ ಡಿಜಿಟಲ್‌ ಕೋಚಿಂಗ್‌ ಸೆಂಟರ್‌

ಪಿಟಿಐ
Published 19 ಫೆಬ್ರುವರಿ 2018, 18:39 IST
Last Updated 19 ಫೆಬ್ರುವರಿ 2018, 18:39 IST

ಬೆಂಗಳೂರು: ಡಿಜಿಟಲ್‌ ಕಲಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ ಎಕ್ಸ್‌ಟ್ರಾಮಾರ್ಕ್ಸ್‌ ಸಂಸ್ಥೆಯು, ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ‘ಸ್ಮಾರ್ಟ್‌ ಕೋಚಿಂಗ್‌ ಸೆಂಟರ್‌’ ಆರಂಭಿಸಲಿದೆ.

‘ದೇಶದಲ್ಲೇ ಇಂತಹ ಪ್ರಯತ್ನ ಮೊದಲನೆಯದು. ಜೆಇಇ, ನೀಟ್‌ (ಎನ್‌ಇಇಟಿ) ಮತ್ತು ಎಐಐಎಂಎಸ್‌ ಪ್ರವೇಶ ಪರೀಕ್ಷೆಗೆ ಹಾಜರಾಗುವವರ ಅನುಕೂಲಕಕ್ಕಾಗಿ ಬೆಂಗಳೂರಿಲ್ಲಿ 3, ಮೈಸೂರು ಮತ್ತು ಶಿವಮೊಗ್ಗದಲ್ಲಿ ತಲಾ 1 ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.

‘ಬೆಂಗಳೂರಿನಲ್ಲಿ ಇಂದಿರಾನಗರ, ಜಯನಗರ, ರಾಜಾಜಿನಗರದಲ್ಲಿ ಕೇಂದ್ರಗಳು ಇರಲಿವೆ. ಎರಡನೆ ಹಂತದಲ್ಲಿ ಕಲಬುರ್ಗಿ, ಹುಬ್ಬಳ್ಳಿ, ದಾವಣೆಗೆರೆ ಸೇರಿದಂತೆ ರಾಜ್ಯದ 11 ನಗರಗಳಲ್ಲಿ ಇಂತಹ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅತುಲ್‌ ಕುಲಶ್ರೇಷ್ಠ ಅವರು ಹೇಳಿದ್ದಾರೆ.

ADVERTISEMENT

ಕಲಿಕಾ ಶುಲ್ಕ: ಒಂದು ವರ್ಷದ ಕಲಿಕಾ ಶುಲ್ಕವು ₹ 80 ಸಾವಿರದಿಂದ ₹ 1 ಲಕ್ಷದವರೆಗೆ ಇರಲಿದೆ. ವಿದ್ಯಾರ್ಥಿಗಳ ಪ್ರತಿಭೆ ಆಧರಿಸಿ ಶುಲ್ಕದಲ್ಲಿ ಶೇ  20ರಿಂದ ಶೇ 50ರಷ್ಟು ವಿನಾಯ್ತಿ ಇರಲಿದೆ. ಏ‍ಪ್ರಿಲ್‌ ತಿಂಗಳಿನಿಂದ ಈ ಕೋಚಿಂಗ್‌ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.