ADVERTISEMENT

ಬಜೆಟ್‌ಗೂ ಮುನ್ನ ನಡೆಯುವ ‘ಹಲ್ವಾ ಸಮಾರಂಭ’ ಕೋವಿಡ್‌ ಕಾರಣಕ್ಕೆ ಈ ಬಾರಿ ರದ್ದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2022, 14:54 IST
Last Updated 27 ಜನವರಿ 2022, 14:54 IST
ಕಳೆದ ಬಾರಿ ನಡೆದಿದ್ದ ಹಲ್ವಾ ಸಮಾರಂಭ
ಕಳೆದ ಬಾರಿ ನಡೆದಿದ್ದ ಹಲ್ವಾ ಸಮಾರಂಭ    

ನವದೆಹಲಿ: ಕೇಂದ್ರ ಬಜೆಟ್‌ ದಾಖಲೆಗಳ ಮುದ್ರಣ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನ ನಡೆಯುವ ‘ಹಲ್ವಾ ಸಮಾರಂಭ’ ಎನ್ನುವ ಸಂಪ್ರದಾಯ ಕೋವಿಡ್‌ 19 ಕಾರಣದಿಂದ ಈ ಬಾರಿ ರದ್ದಾಗಿದೆ.

ಈ ಕುರಿತು ಹಣಕಾಸು ಸಚಿವಾಲಯ ಗುರುವಾರ ಅಧಿಕೃತ ಹೇಳಿಕೆ ನೀಡಿದೆ.

ADVERTISEMENT

‘ಈ ಬಾರಿಯ ಹಲ್ವಾ ಸಮಾರಂಭವನ್ನು ಕೋವಿಡ್‌ ಕಾರಣಕ್ಕೆ ರದ್ದು ಮಾಡಲಾಗಿದೆ. ಬಜೆಟ್‌ನ ಕೊನೆ ಹಂತದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಸಿಬ್ಬಂದಿಗೆ ಅವರಿರುವಲ್ಲಿಯೇ ಸಿಹಿ ವಿತರಿಸಲಾಗಿದೆ’ ಎಂದು ಹಣಕಾಸು ಇಲಾಖೆ ಹೇಳಿದೆ.

ಪ್ರತಿ ವರ್ಷ ಸರ್ಕಾರ ಬಜೆಟ್ ಮಂಡನೆಗೆ ಕೆಲವು ದಿನಗಳ ಮುನ್ನ 'ಹಲ್ವಾ ಸಮಾರಂಭ'ವನ್ನು ಆಯೋಜಿಸುತ್ತದೆ. ಇದು ಬಜೆಟ್‌ನ ಕೊನೆ ಹಂತದ ಪ್ರಕ್ರಿಯೆಗಳ ಅಧಿಕೃತ ಆರಂಭವನ್ನು ಸೂಚಿಸುತ್ತದೆ. ಹಲ್ವಾವನ್ನು ದೊಡ್ಡ ಕಡಾಯಿಯಲ್ಲಿ ತಯಾರಿಸಿ, ಹಣಕಾಸು ಸಚಿವಾಲಯದ ಸಿಬ್ಬಂದಿಗೆ ವಿತರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.