ನಿರ್ಮಲಾ ಸೀತಾರಾಮನ್, ನವೋದ್ಯಮ
(ಪಿಟಿಐ, ಐಸ್ಟೋಕ್ ಚಿತ್ರ)
ನವದೆಹಲಿ: ದೇಶದ ನವೋದ್ಯಮಗಳನ್ನು ಉತ್ತೇಜಿಸಲು ₹10,000 ಕೋಟಿ ಮೊತ್ತದ ನೂತನ ನಿಧಿಗಳ ನಿಧಿ ಯೋಜನೆ (ಎಫ್‌ಎಫ್‌ಎಸ್) ಅನ್ನು ಹಣಕಾಸು ಸಚಿವರು ಪ್ರಕಟಿಸಿದರು.
ನವೋದ್ಯಮಗಳಿಗೆ ಒತ್ತುನೀಡಲೆಂದೇ ಪರ್ಯಾಯ ಬಂಡವಾಳ ಹೂಡಿಕೆ ನಿಧಿಗಳು (ಎಐಎಫ್ಸ್) ಇವೆ. ಇವುಗಳಲ್ಲಿ ಹಣ ತೊಡಗಿಸಲು ಹಲವರು ಮುಂದಾಗಿದ್ದು, ₹ 91,000 ಕೋಟಿಗೂ ಹೆಚ್ಚು ಹೂಡಿಕೆಯ ಭರವಸೆ ದೊರೆತಿದೆ ಎಂದೂ ಅವರು ಹೇಳಿದರು.
2024ರ ಅಕ್ಟೋಬರ್ 31ರವರೆಗೆ ಎಐಎಫ್ಸ್ ಒಳಗೊಂಡಂತೆ ಎಫ್‌ಎಫ್‌ಎಸ್‌ಗೆ ₹20,572.14 ಕೋಟಿ ಬಂಡವಾಳ ಹರಿದುಬಂದಿದೆ ಎಂದು ಮಾಹಿತಿ ನೀಡಿದರು.
2016ರಲ್ಲಿಯೂ ಕೇಂದ್ರ ಸರ್ಕಾರವು ನವೋದ್ಯಮಗಳ ಉತ್ತೇಜನಕ್ಕೆಂದು ಇದೇ ರೀತಿ ₹10,000 ಕೋಟಿ ಮೊತ್ತದ ಯೋಜನೆಯನ್ನು ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.