ಬಜೆಟ್ ಪ್ರತಿ ಇರುವ ಟ್ಯಾಬ್‌ನೊಂದಿಗೆ ಸಂಸತ್ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಪಿಟಿಐ ಚಿತ್ರ
ನವದೆಹಲಿ: ತೆರಿಗೆದಾರರು ಹೊಂದಿರುವ ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2025–26ನೇ ಸಾಲಿನ ಆಯವ್ಯಯ ಮಂಡಿಸಿದ ಸಂದರ್ಭದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.
ಈ ಮೊದಲು ಒಂದು ಮನೆಗೆ ತೆರಿಗೆ ವಿನಾಯಿತಿ ಇತ್ತು. ಎರಡನೇ ಮನೆ ಹೊಂದಿದ್ದರೆ ಮಾರುಕಟ್ಟೆ ಮೌಲ್ಯಕ್ಕೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇದೀಗ 2ನೇ ಮನೆಗೂ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಮಧ್ಯಮವರ್ಗದವರಿಗೆ ತೆರಿಗೆ ಹೊರೆಯನ್ನು ತಗ್ಗಿಸುವ ಪ್ರಯತ್ನವಾಗಿದೆ. ಇದರಿಂದ ಒಂದಕ್ಕಿಂತ ಹೆಚ್ಚು ಮನೆ ಹೊಂದಿರುವವರಿಗೆ ಒಂದಷ್ಟು ತೆರಿಗೆ ವಿನಾಯಿತಿ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಈ ಸೌಲಭ್ಯದಿಂದ ಎರಡು ಮನೆ ಹೊಂದಿರುವವರು ಒಂದನ್ನು ವಾಸಕ್ಕೆ ಮತ್ತೊಂದು ಆಗಾಗ್ಗ ಬಂದು ಹೋಗುವ ಪ್ರವಾಸದ ಮನೆಯಾಗಿ ಹೊಂದುವ ಅವಕಾಶ ನೀಡಲಾಗಿದೆ.
ಆದಾಯ ತೆರಿಗೆಯ ಮಿತಿಯನ್ನೂ ಹೊಸ ತೆರಿಗೆ ಪದ್ಧತಿಯಲ್ಲಿ ವೇತನದಾರ ಹಿತ ಕಾಯಲಾಗಿದೆ. ಸದ್ಯ ಇರುವ ತೆರಿಗೆ ವಿನಾಯಿತಿ ಮಿತಿ ₹7ಲಕ್ಷದಿಂದ ₹12 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಇದರೊಂದಿಗೆ ವಾರ್ಷಿಕ ಟಿಡಿಎಸ್ ಮೊತ್ತವನ್ನು ಸದ್ಯ ಇರುವ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.