ADVERTISEMENT

ನವನಗರ ಅಭಿವೃದ್ಧಿ; ನವೋದ್ಯಮಗಳಿಗೆ ಪ್ರೋತ್ಸಾಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 13:02 IST
Last Updated 4 ಮಾರ್ಚ್ 2022, 13:02 IST

ಬೆಂಗಳೂರು: ನವಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿ ವಿಭಾಗದಲ್ಲಿ ತಲಾ ಒಂದು ಪರಿಸರಸ್ನೇಹಿ ಹಾಗೂ ಯೋಜನಾಬದ್ಧ ನವನಗರ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

ರಾಜ್ಯದಲ್ಲಿ ದೊಡ್ಡ ಗಾತ್ರದ ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ವಸಾಹತುಗಳ ಸ್ಥಾಪನೆ, ಕಾರ್ಯಾಚರಣೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ‘ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ ರಚನೆ ಹಾಗೂ ತುಮಕೂರು ಮತ್ತು ಧಾರವಾಡದಲ್ಲಿ ‘ವಿಶೇಷ ಹೂಡಿಕೆ ಪ್ರದೇಶ ಅಧಿಸೂಚನೆ’ ರೂಪಿಸಲು ತೀರ್ಮಾನಿಸಲಾಗಿದೆ.

*ಬೆಂಗಳೂರಿನಲ್ಲಿ ‘ಮೆಗಾ ಜ್ಯುವೆಲ್ಲರಿ ಪಾರ್ಕ್‌ ಸ್ಥಾಪನೆ. 10 ಸಾವಿರ ಮಂದಿಗೆ ಉದ್ಯೋಗಾವಕಾಶ.

ADVERTISEMENT

*ಧಾರವಾಡದಲ್ಲಿ ‘ಎಫ್ಎಂಸಿಜಿ ಕ್ಲಸ್ಟರ್‌’ ಅಭಿವೃದ್ಧಿ.

*ಸರ್ಕಾರದಿಂದಮುಂದಿನ 2 ವರ್ಷ ಮೈಷುಗರ್‌ ಕಾರ್ಖಾನೆ ನಿರ್ವಹಣೆ. ಯಂತ್ರೋಪಕರಣ ದುರಸ್ತಿಗೆ ₹50 ಕೋಟಿ ಅನುದಾನ.

*ಕಲಬುರಗಿ ಹಾಗೂ ವಿಜಯಪುರದಲ್ಲಿ ಮೆಗಾ–ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ.

*ನವಲಗುಂದ ಮತ್ತು ರಾಣೆಬೆನ್ನೂರಿನಲ್ಲಿ ಜವಳಿ ಪಾರ್ಕ್ ಸ್ಥಾಪನೆ. 5 ಸಾವಿರ ಉದ್ಯೋಗ ಸೃಷ್ಟಿ.

*ಬಳ್ಳಾರಿಯಲ್ಲಿ ಜೀನ್ಸ್‌ ಮತ್ತು ಉಡುಪು ಸಂಬಂಧಿತ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ.

*ರಾಜ್ಯದಲ್ಲಿ ಸೆಮಿಕಂಡಕ್ಟರ್‌ ತಯಾರಿಕಾ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ.

*ಕಲ್ಯಾಣ ಕರ್ನಾಟಕ ಭಾಗದನಾವಿನ್ಯತೆಯುಳ್ಳ 25 ನವೋದ್ಯಮಗಳನ್ನು ಉತ್ತೇಜಿಸಲು ‘ಎಲಿವೇಟ್‌–ಕಲ್ಯಾಣ ಕರ್ನಾಟಕ’ ಕಾರ್ಯಕ್ರಮ.

*ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿನ ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡಲು ತಲಾ ₹20 ಕೋಟಿ ವೆಚ್ಚದಲ್ಲಿ ‘ಬಿಯಾಂಡ್‌ ಬೆಂಗಳೂರು ಕ್ಲಸ್ಟರ್‌ ಸೀಡ್‌ ಫಂಡ್‌ ಫಾರ್‌ ಸ್ಟಾರ್ಟಪ್ಸ್‌’ ಸ್ಥಾಪನೆ. ಪ್ರಸಕ್ತ ಸಾಲಿನಲ್ಲಿ ₹12 ಕೋಟಿ ಅನುದಾನ.

*ಬೆಳಗಾವಿಯಲ್ಲಿ ₹150 ಕೋಟಿ ವೆಚ್ಚದಲ್ಲಿ ‘ಗ್ಲೋಬಲ್‌ ಎಮರ್ಜಿಂಗ್‌ ಟೆಕ್ನಾಲಜಿ ಡಿಸೈನ್‌ ಸೆಂಟರ್‌’ ಸ್ಥಾಪನೆ.

*ಮೈಸೂರಿನಲ್ಲಿ ₹30 ಕೋಟಿ ವೆಚ್ಚದಲ್ಲಿ ‘ಮೈಸೂರು ದಿ ಗ್ಲೋಬಲ್‌ ಟೆಕ್ನಾಲಜಿ ಸೆಂಟರ್‌ ಪ್ಲಗ್‌ ಆ್ಯಂಡ್‌ ಪ್ಲೇ’ ಸೌಲಭ್ಯ ಕಲ್ಪಿಸಲು ನಿರ್ಧಾರ. ಇದಕ್ಕಾಗಿ 2022–23ರಲ್ಲಿ ₹10 ಕೋಟಿ ಅನುದಾನ.

*ರಾಜ್ಯದ 15 ಪ್ರವಾಸಿ ತಾಣಗಳ ಎಆರ್‌/ವಿಆರ್‌ ತುಣುಕುಗಳ ಸೃಜನೆಗೆ ₹15 ಕೋಟಿ.

*ಕೇಂದ್ರ ಮತ್ತು ಉದ್ಯಮಿಗಳ ಸಹಭಾಗಿತ್ವದಲ್ಲಿ ₹50 ಕೋಟಿ ವೆಚ್ಚದಲ್ಲಿ ‘ಕರ್ನಾಟಕ ಆ್ಯಕ್ಸಲೆರೇಷನ್‌–ನೆಟ್‌ವರ್ಕ್‌’ ಸ್ಥಾಪನೆ. ಮೊದಲ ಹಂತದಲ್ಲಿ ₹20 ಕೋಟಿ ಅನುದಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.