ADVERTISEMENT

ಬಜೆಟ್‌ 2026: ಗಮನಿಸಬಹುದಾದ ಪ್ರಮುಖ 10 ಅಂಶಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 5:30 IST
Last Updated 1 ಫೆಬ್ರುವರಿ 2026, 5:30 IST
   

ನವದೆಹಲಿ: ಕೇಂದ್ರಬಜೆಟ್‌ 2026–27 ಮಂಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ಅವರ ಅನುಮತಿ ಕೋರಿ ಸಂಸತ್‌ ಭವನದತ್ತ ಹೊರಟಿದ್ದಾರೆ.

ಆದಾಯ ಕೊರತೆ ಮತ್ತು ಸರ್ಕಾರಿ ಸಾಲ

<div class="paragraphs"><p>–ಗೆಟ್ಟಿ ಚಿತ್ರ</p></div>

ಸಾಲ (ಸಾಂದರ್ಭಿಕ ಚಿತ್ರ)

ಈ ವರ್ಷದ ಬಜೆಟ್‌ನಲ್ಲಿ ಒಟ್ಟು ಸರ್ಕಾರಿ ಸಾಲವನ್ನು ದೇಶೀಯ ಉತ್ಪನ್ನದ ಶೇ 49ರಿಂದ ಶೇ 51ರ ವ್ಯಾಪ್ತಿಗೆ ಇಳಿಸುವತ್ತ ಗಮನ ಹರಿಸುವ ನಿರೀಕ್ಷೆ ಇದೆ ಎಂದೆನ್ನುತ್ತಾರೆ ತಜ್ಞರು. 2026–27ರಲ್ಲಿ ಸರ್ಕಾರವು ಜಿಡಿಪಿಯ ವಿತ್ತೀಯ ಕೊರತೆಯನ್ನು ಶೇ 4.2ರಷ್ಟು ಏರುವ ನಿರೀಕ್ಷೆ ಇದೆ. ಸಾಲವು ₹16 ಟ್ರಿಲಿಯನ್‌ನಿಂದ ₹16.8 ಟ್ರಿಲಿಯನ್‌ಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ADVERTISEMENT

ದೀರ್ಘಾವಧಿ ಬಂಡವಾಳ ಲಾಭಗಳ ಮೇಲೆ ಗಮನ

ವಿದೇಶಿ ನೇರ ಬಂಡವಾಳ ಹೂಡಿಕೆ

ದೀರ್ಘಾವದಿ ಬಂಡವಾಳ ಲಾಭಗಳ ಮೇಲೆ ವಿಧಿಸಲಾಗುವ ತೆರಿಗೆಯ ಮಿತಿಯಲ್ಲಿ ಹೆಚ್ಚಳ ಮತ್ತು ಆದಾಯ ತೆರಿಗೆ ರಿಯಾಯಿತಿ ನಿರ್ವಹಿಸುವ ಸೆಕ್ಷನ್‌ 87ಎ ಅಡಿಯಲ್ಲಿ ರಿಯಾಯಿತಿ ವಿಸ್ತರಣೆಯ ನಿರೀಕ್ಷೆ ಇದೆ. 

₹12ಲಕ್ಷವರೆಗೂ ಒಟ್ಟು ತೆರಿಗೆ ವಿಧಿಸಬಹುದಾದ ಆದಾಯ ಹೊಂದಿರುವ ವ್ಯಕ್ತಿಗಳು ₹60ಸಾವಿರವರೆಗೂ ತೆರಿಗೆ ರಿಯಾಯಿತಿ ಪಡೆಯಬಹುದು. ಆದರೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಏನೆಲ್ಲಾ ಘೋಷಣೆಯಾಗಲಿದೆ ಎಂಬುದನ್ನು ನಿರೀಕ್ಷಿಸಬಹುದು

ರಕ್ಷಣಾ ಇಲಾಖೆ ವೆಚ್ಚ

ಸೇನೆ

ಬಜೆಟ್‌ನ ಒಟ್ಟು ವೆಚ್ಚದ ಶೇ 20ರಷ್ಟು ರಕ್ಷಣಾ ಇಲಾಖೆಗೆ ಸೇರುತ್ತದೆ. ಇದರಲ್ಲಿ ದೇಶೀಯ ಹೂಡಿಕೆಗೆ ಇರುವ ಷರತ್ತುಗಳನ್ನು ಬಜೆಟ್‌ ಇನ್ನಷ್ಟು ಸಡಿಲಗೊಳಿಸುವುದೇ ಎಂಬ ನಿರೀಕ್ಷೆ ಇದೆ.

ಸ್ಟ್ಯಾಂಡರ್ಡ್‌ ಡಿಡಕ್ಷನ್‌ನಲ್ಲಿ ಏರಿಕೆ

ಆದಾಯ ತೆರಿಗೆ

ಹೊಸ ತೆರಿಗೆ ಪದ್ಧತಿಯಲ್ಲಿ ಹಾಲಿ ಇರುವ ₹75 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹1ಲಕ್ಷಕ್ಕೆ ಏರಿಕೆಯಾಗಲಿದೆ ಎಂಬ ನಿರೀಕ್ಷೆಗಳಿವೆ.

ಆಮದು ಸುಂಕಗಳ ಇಳಿಕೆ

ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಎಲೆಕ್ಟ್ರಾನಿಕ್ ಬಿಡಿಭಾಗಗಳು ಮತ್ತು ಜವಳಿ ಸೇರಿದಂತೆ ಹಲವಾರು ರಫ್ತು-ಆಧಾರಿತ ಕೈಗಾರಿಕೆಗಳಿಗೆ ಸಂಬಂಧಿತ ಒಳಹರಿವಿನ ಮೇಲಿನ ಆಮದು ಸುಂಕಗಳನ್ನು ಕಡಿಮೆ ಮಾಡಬೇಕೆಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟವು ಬೇಡಿಕೆ ಇಟ್ಟಿದೆ. 

ಅಮೆರಿಕ ಪ್ರವೇಶಿಸುವ ಭಾರತೀಯ ಸರಕುಗಳ ಮೇಲೆ ಈಗಾಗಲೇ ಶೇ 50ರಷ್ಟು ಸುಂಕವನ್ನು ಡೊನಾಲ್ಡ್‌ ಟ್ರಂಪ್ ಹೇರಿದ್ದಾರೆ. ಈ ಒತ್ತಡವನ್ನು ಎದುರಿಸಲು ದೇಶೀಯ ರಫ್ತುದಾರರು ಬಜೆಟ್‌ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. 

ಖಾಸಗಿ ವಲಯದ ಹೂಡಿಕೆ

ಹೂಡಿಕೆ

ಬಂಡವಾಳ ಹೂಡುವ ಖಾಸಗಿಯವರಿಗೆ ತೆರಿಗೆ ವಿನಾಯಿತಿ ಮತ್ತು ಉದ್ಯಮ ಆರಂಭಿಸಲು ಇನ್ನಷ್ಟು ಸರಳ ಮಾರ್ಗಗಳ ಘೋಷಣೆ ಆಗುವುದೇ ಎಂಬ ಕುತೂಹಲವಿದೆ. ಖಾಸಗಿ ವಲಯದ ಹೂಡಿಕೆಯ ಹೆಚ್ಚಳದ ಮೂಲಕ ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ರೂಪಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ತೆರಿಗೆ ಕಡಿತ

ತೆರಿಗೆ ಕಡಿತದ ಮೂಲಕ ಸರ್ಕಾರವು ಆರ್ಥಿಕತೆಯನ್ನು ಹೆಚ್ಚಿಸಲು ಯತ್ನಿಸಬಹುದು ಮತ್ತು ವ್ಯವಹಾರ ಕೈಗೊಳ್ಳಲು ಸರಳ ಮಾರ್ಗಗಳನ್ನು ನೀಡುವುದೇ ಎಂದು ಎದುರು ನೋಡಲಾಗುತ್ತಿದೆ.

ಬಂಡವಾಳ ವೆಚ್ಚ

ಜಿಡಿಪಿ

2026-27ರ ಬಂಡವಾಳ ವೆಚ್ಚದಲ್ಲೂ ಹೆಚ್ಚಳ ಸಾಧ್ಯತೆ ಇದೆ. 2021ರಿಂದ 2026ರವರೆಗಿನ ದತ್ತಾಂಶವನ್ನು ಗಮನಿಸಿದರೆ ಮೂಲಸೌಕರ್ಯಕ್ಕಾಗಿ ಮಾಡಿದ ಖರ್ಚು ಹಾಗೂ ಪ್ರಯತ್ನಗಳ ಫಲವಾಗಿ ಜಿಡಿಪಿಯಲ್ಲಿ ಬಂಡವಾಳ ವೆಚ್ಚದ ಪಾಲು ಶೇ 2.5ರಿಂದ ಶೇ 3.1ಕ್ಕೆ ಏರಿತು. ಈ ಬಾರಿಯೂ ಇದರ ನಿರೀಕ್ಷೆ ಇದೆ.

ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆ

ಷೇರು ವಹಿವಾಟಿನಲ್ಲಿ ನಷ್ಟ ಉಂಟಾದರೂ ಅದು ತೆರಿಗೆ ವ್ಯಾಪ್ತಿಗೆ ಒಳಪಡುತ್ತಿತ್ತು. ಅದನ್ನು ರದ್ದುಪಡಿಸುವಂತೆ ತೆರಿಗೆ ತಜ್ಞರು ಆಗ್ರಹಿಸಿದ್ದಾರೆ. ಇದನ್ನು ಹೂಡಿಕೆದಾರರ ಸ್ನೇಹಿಯಾಗಿಸುತ್ತಾರೆಯೇ ವಿತ್ತ ಸಚಿವೆ ಎಂದು ಕಾದುನೋಡುತ್ತಿದ್ದಾರೆ ಜನ.

ಭಾರತದ ಸಾಲದ ಮೇಲೆ ಗಮನ

ಹಣ

ದೇಶ ಪಡೆಯುವ ಸಾಲದ ಮೇಲೂ ಗಮನ ನೆಟ್ಟಿದೆ. ಏಕೆಂದರೆ ಹಣಕಾಸಿನ ಕೊರತೆ ಹೆಚ್ಚಾಗುವುದರಿಂದ ಆ ವರ್ಷದಲ್ಲಿ ಸಾಲದ ಪ್ರಮಾಣವೂ ಹೆಚ್ಚಾಗುವುದು ಸಾಮಾನ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.