
ಪಿಟಿಐ
ನವದೆಹಲಿ: ಡಿಸೆಂಬರ್ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2025–26ನೇ ಬಜೆಟ್‌ನಲ್ಲಿ ಅಂದಾಜು ಮಾಡಿರುವ ಮೊತ್ತದ ಶೇಕಡ 54.5ರಷ್ಟು ಆಗಿದೆ. ಮೊತ್ತದ ಲೆಕ್ಕದಲ್ಲಿ ಇದು ₹8.55 ಲಕ್ಷ ಕೋಟಿ.
ಹಿಂದಿನ ವರ್ಷದ ಇದೇ ಹೊತ್ತಿನಲ್ಲಿ ಕೇಂದ್ರದ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ 56.7ರಷ್ಟು ಆಗಿತ್ತು.
2025–26ನೇ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯು (ವೆಚ್ಚ ಹಾಗೂ ವರಮಾನದ ನಡುವಿನ ವ್ಯತ್ಯಾಸ) ದೇಶದ ಒಟ್ಟು ಜಿಡಿಪಿಯ ಶೇ 4.4ರಷ್ಟು ಇರಲಿದೆ ಎಂಬುದು ಕೇಂದ್ರ ಸರ್ಕಾರದ ಅಂದಾಜು. ಇದು ಮೊತ್ತದ ಲೆಕ್ಕದಲ್ಲಿ ₹15.69 ಲಕ್ಷ ಕೋಟಿ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.