ADVERTISEMENT

Karnataka Budget 2025: ಆಯವ್ಯಯ ಪಕ್ಷಿನೋಟ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 7:45 IST
Last Updated 7 ಮಾರ್ಚ್ 2025, 7:45 IST
   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ವಿವಿಧ ವಲಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.

ಆಯವ್ಯಯ ಪಕ್ಷಿನೋಟ ಇಲ್ಲಿದೆ..

  • ಆಯವ್ಯಯ ಗಾತ್ರ (ಸಂಚಿತ ನಿಧಿ)– ‌₹ 4,09,549 ಕೋಟಿ.

  • ಒಟ್ಟು ಸ್ವೀಕೃತಿ– ₹4,08,647 ಕೋಟಿ.

    ADVERTISEMENT
  • ರಾಜಸ್ವ ಸ್ವೀಕೃತಿ –₹ 2,92, 477 ಕೋಟಿ.

  • ಸಾರ್ವಜನಿಕ ಋಣ–₹1,16,000 ಕೋಟಿ ಸೇರಿದಂತೆ ಬಂಡವಾಳ ಸ್ವೀಕೃತಿ ₹1,16,170 ಕೋಟಿ.

  • ಒಟ್ಟು ವೆಚ್ಚ– ₹ 4,09,549 ಕೋಟಿ.

  • ರಾಜಸ್ವ ವೆಚ್ಚ-3,11,739 ಕೋಟಿ.

  • ಬಂಡವಾಳ ವೆಚ್ಚ-71,336 ಕೋಟಿ.

  • ಸಾಲ ಮರುಪಾವತಿ- 26,474 ಕೋಟಿ.

  • ಎಸ್‌.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಅಡಿಯಲ್ಲಿ ಆಯವ್ಯಯದಲ್ಲಿ ಒದಗಿಸಿದ ಅನುದಾನ ₹42,018 ಕೋಟಿ.

  • ಎಸ್‌.ಸಿ.ಎಸ್.ಪಿ. ಅಡಿ ₹29,992 ಕೋಟಿ ಹಾಗೂ ಟಿ.ಎಸ್.ಪಿ. ಅಡಿ ₹12,026 ಕೋಟಿ.

  • ಮಹಿಳಾ ಆಯವ್ಯಯದಲ್ಲಿ ಒದಗಿಸಿದ ಅನುದಾನ ₹ 94,084 ಕೋಟಿ.

  • ಮಕ್ಕಳ ಆಯವ್ಯಯದಲ್ಲಿ ಒದಗಿಸಿದ ಅನುದಾನ- ₹62,033 ಕೋಟಿ.

  • ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ₹800 ಕೋಟಿ ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.