ADVERTISEMENT

Union Budget 2026 | ಎರಡು ಮತ್ತು ಮೂರನೇ ಹಂತದ ನಗರಗಳಿಗೆ ₹5 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 14:06 IST
Last Updated 1 ಫೆಬ್ರುವರಿ 2026, 14:06 IST
   

ಎರಡನೇ ಮತ್ತು ಮೂರನೇ ಹಂತದ ಮತ್ತು ಧಾರ್ಮಿಕ ಕೇಂದ್ರಗಳಿರುವ ನಗರ ಮತ್ತು ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅಂಥ ನಗರಗಳ ಮೂಲಸೌಕರ್ಯ ಮತ್ತು ಆಧುನಿಕರಣದತ್ತ ಗಮನ ಹರಿಸಲಾಗುತ್ತದೆ. ನಗರದ ಅಭಿವೃದ್ಧಿಯ ವೇಗವರ್ಧಕಗಳಾಗಿರುವ ಆರ್ಥಿಕ ಪ್ರದೇಶಗಳಲ್ಲಿ(ಸಿಇಆರ್‌) ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು 5 ವರ್ಷಗಳಲ್ಲಿ ಪ್ರತಿ ಸಿಇಆರ್‌ಗೆ ₹5 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ.

‌ಮುನ್ಸಿಪಲ್‌ ಬಾಂಡ್‌ಗಳಿಗೆ ಪ್ರೋತ್ಸಾಹ

ದೊಡ್ಡ ನಗರಗಳಲ್ಲಿ ಅಧಿಕ ಮೌಲ್ಯದ ಮುನ್ಸಿಪಲ್‌ ಬಾಂಡ್‌ಗಳ ಒದಗಿಸುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ₹1,000 ಕೋಟಿಗಿಂತ ಹೆಚ್ಚಿನ ಬಾಂಡ್‌ಗಳ ವಿತರಣೆಯ ಮೂಲಕ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಲ ಪಡೆಯುವುದರ ಮೇಲೆ ₹ 100 ಕೋಟಿ ಪ್ರೋತ್ಸಾಹಧನವನ್ನು ಘೋಷಿಸಲಾಗಿದೆ.

ಸಣ್ಣ ಮತ್ತು ಮಧ್ಯಮ ಹಂತದ ನಗರಗಳಿಗೆ ನೆರವು ನೀಡಲು ₹200 ಕೋಟಿವರೆಗಿನ ಮೌಲ್ಯದ ಬಾಂಡ್‌ಗಳಿಗೆ ಅಮೃತ ಯೋಜನೆಯಡಿ ನೀಡಲಾಗುವ ಪ್ರೋತ್ಸಾಹಧನವನ್ನು ಮುಂದುವರಿಸಲಾಗುವುದು ಎಂದು ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.