ADVERTISEMENT

Union Budget 2026: ಕ್ರೀಡಾ ಅಭಿವೃದ್ಧಿಗೆ ಖೇಲೊ ಇಂಡಿಯಾ ಮಿಷನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 8:31 IST
Last Updated 1 ಫೆಬ್ರುವರಿ 2026, 8:31 IST
<div class="paragraphs"><p>ಸಂಸತ್‌ನಲ್ಲಿ  ನಿರ್ಮಲಾ ಸೀತಾರಾಮನ್&nbsp;ಬಜೆಟ್ ಭಾಷಣ</p></div>

ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ

   

– ಪಿಟಿಐ ಚಿತ್ರ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸಿ ಚಾರಿತ್ರಿಕ ದಾಖಲೆ ಬರೆದರು. ಅವರು ಈ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. 

ADVERTISEMENT

ಕ್ರೀಡಾ ಕ್ಷೇತ್ರವು ಉದ್ಯೋಗ, ಕೌಶಲ್ಯಾಭಿವೃದ್ಧಿ ಮತ್ತು ವಿವಿಧ ಉದ್ಯೋಗಾವಕಾಶಗಳನ್ನು ಒದಗಿಸುವ ಪ್ರಮುಖ ವಲಯವಾಗಿದೆ. ಖೇಲೊ ಇಂಡಿಯಾ ಕಾರ್ಯಕ್ರಮದ ಮೂಲಕ ಕ್ರೀಡಾ ಪ್ರತಿಭೆಗಳನ್ನು ಪೋಷಿಸಲಾಗುತ್ತಿದೆ.

ಮುಂದಿನ ದಶಕದಲ್ಲಿ ಕ್ರೀಡಾ ಕ್ಷೇತ್ರವನ್ನು ಅಭಿವೃದ್ದಿಗೊಳಿಸುವ ಉದ್ದೇಶದಿಂದ ಖೇಲೊ ಇಂಡಿಯಾ ಮಿಷನ್ ಆರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. 

ಖೇಲೊ ಇಂಡಿಯಾ ಮಿಷನ್‌ನ ಐದು ಕ್ರಮಗಳು...

1) ತರಬೇತಿ ಕೇಂದ್ರಗಳ ಮೂಲಕ ಕ್ರೀಡಾ ಪ್ರತಿಭೆಗಳ ಅನ್ವೇಷಣೆ
2) ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿಗಳ ನೇಮಕ 
3) ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಮನ್ವಯಕ್ಕೆ ಯೋಜನೆ
4) ಕ್ರೀಡಾ ಸಂಸ್ಕೃತಿ ಬೆಳೆಸಲು ಮತ್ತು ವೇದಿಕೆ ಒದಗಿಸಲು ಸ್ಪರ್ಧೆಗಳು ಹಾಗೂ ಲೀಗ್‌ಗಳ ಆಯೋಜನೆ
5) ತರಬೇತಿ ಮತ್ತು ಟೂರ್ನಿಗಳಿಗೆ ಅಗತ್ಯ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೊಳಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.