ADVERTISEMENT

Union Budget 2026: ಕೌಶಲ ತರಬೇತಿಗೆ ₹1,000 ಕೋಟಿ

ಪಿಟಿಐ
Published 1 ಫೆಬ್ರುವರಿ 2026, 14:36 IST
Last Updated 1 ಫೆಬ್ರುವರಿ 2026, 14:36 IST
<div class="paragraphs"><p>ಲೋಕಸಭೆ</p></div>

ಲೋಕಸಭೆ

   

ನವದೆಹಲಿ: ವಿಕಸಿತ ಭಾರತ ಗುರಿಸಾಧಿಸಲು ದೇಶದ ಯುವಜನತೆಗೆ ಕೌಶಲ ಪೂರ್ಣ ವೃತ್ತಿಮಾರ್ಗಗಳನ್ನು ರೂಪಿಸಲು ವಿವಿಧ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. 

ಕೌಶಲಪೂರ್ಣ ಆರೋಗ್ಯ ವೃತ್ತಿಪರತೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ 1 ಲಕ್ಷ ಮಂದಿ ಆರೋಗ್ಯ ವೃತ್ತಿಪರರಿಗೆ (ಎಎಚ್‌ಪಿಎಸ್‌) ಐದು ವರ್ಷಗಳ ತರಬೇತಿ ಒದಗಿಸುವ ಯೋಜನೆಯನ್ನು ಪ್ರಸ್ತಾಪಿಸಿದೆ.

ADVERTISEMENT

ಈ ಉದ್ದೇಶಕ್ಕಾಗಿ ಇದೇ ಮೊದಲ ಬಾರಿಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಆಯವ್ಯಯದಲ್ಲಿ ₹1,000 ಕೋಟಿ ಅನುದಾನ ಘೋಷಿಸಲಾಗಿದೆ. ಜತೆಗೆ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿರುವ ಕಾರಣ ವೃದ್ಧರ ಆರೈಕೆ‌ಗೆಂದೇ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ 1.5 ಲಕ್ಷ ಮಂದಿಗೆ ತರಬೇತಿ ಒದಗಿಸಲಾಗುತ್ತದೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.