ADVERTISEMENT

ಸ್ಪರ್ಧಾವಾಣಿ | ಚಾಕೋಲೆಟ್ ಉದ್ಯಮ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 0:30 IST
Last Updated 5 ಡಿಸೆಂಬರ್ 2024, 0:30 IST
   

ಹವಾಮಾನ ಬದಲಾವಣೆಯಿಂದಾಗಿ ಕೋಕೋ ಬೀಜದ ದರ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದರಿಂದ ಚಾಕೋಲೆಟ್ ಉದ್ಯಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. 2024ರ ಏಪ್ರಿಲ್ ತಿಂಗಳ ಅನ್ವಯ ಕೋಕೋ ಬೀಜದ ದರ ಪ್ರತಿ ಟನ್‌ಗೆ 12,000 ಅಮೆರಿಕದ ಡಾಲರ್ ಇತ್ತು, 2023ರ ದರಗಳಿಗಿಂತ ನಾಲ್ಕು ಪಟ್ಟು ದರ ಹೆಚ್ಚಳಗೊಂಡಿದೆ. 2023-24ರ ಅವಧಿಯಲ್ಲಿ 3,74,000 ಟನ್ ಕೋಕೋ ಬೀಜ ಉತ್ಪಾದನೆ ಇಳಿಮುಖವಾಗಿರುವುದರ ಬಗ್ಗೆ ಅಂತರರಾಷ್ಟ್ರೀಯ ಕೋಕೋ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.

ಕಾರಣಗಳು
  • ಜಾಗತಿಕ ಮಟ್ಟದ ಕೋಕೋ ಬೀಜದ ಉತ್ಪಾದನೆಯಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಾದ  ಐವರಿ ಕೋಸ್ಟ್ ಮತ್ತು ಘಾನಾ ದೇಶಗಳು ಶೇ 60ರಷ್ಟು ಉತ್ಪಾದನೆ ಮಾಡುತ್ತಿವೆ. ಆದರೆ, ಹವಾಮಾನ ಬದಲಾವಣೆ ಮತ್ತು ‘ಎಲ್ ನಿನೊ’ ಪರಿಣಾಮದಿಂದಾಗಿ ಈ ಪ್ರದೇಶಗಳಲ್ಲಿ ಕೋಕೋ ಬೀಜದ ಇಳುವರಿ ಕಡಿಮೆಯಾಗಿದೆ. 

  • ಪೆಸಿಫಿಕ್ ಸಮುದ್ರದ ಬಳಿ ತಾಪಮಾನ ಹೆಚ್ಚಾಗುವುದನ್ನು ‘ಎಲ್ ನಿನೊ’ ಎನ್ನಲಾಗುತ್ತದೆ. ಪಶ್ಚಿಮ ಆಫ್ರಿಕಾದ ಕೆಲ ಭಾಗಗಳಲ್ಲಿ ಸ್ವಾಭಾವಿಕ ಪ್ರಮಾಣಕ್ಕಿಂತ ಮಳೆ ಹೆಚ್ಚಾಗಿದೆ. ಇದರಿಂದ ರೋಗ ರುಜಿನಗಳು ಹೆಚ್ಚಾಗಿದ್ದು, ಉತ್ಪಾದನೆಯ ಸಾಮರ್ಥ್ಯ ಕಡಿಮೆಯಾಗಿದೆ. 

    ADVERTISEMENT
  • ಕೋಕೋ ಬೀಜದ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ರೈತರಿಗೆ  ಸೂಕ್ತ ವೇತನ ಸಿಗದ ಕಾರಣ ಮತ್ತು ಬಹುತೇಕರು ಇದರ ಕೃಷಿಯಲ್ಲಿ ನಿರಾಸಕ್ತಿ ತೋರುವ ಕಾರಣಗಳಿಂದಾಗಿಯೂ ಇಳುವರಿ ಕಡಿಮೆಯಾಗಿದೆ. 

  • ಚಾಕೋಲೆಟ್‌ ಉದ್ಯಮದಲ್ಲಿ ತೊಡಗಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಿನ ಪ್ರಮಾಣದ ಲಾಭ ಗಳಿಸುತ್ತಿವೆ. ಆದರೆ, ರೈತರ ಆದಾಯದ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ನಿರಾಸಕ್ತಿ ಕಾರಣವಾಗಿದೆ. 

ಕೋಕೋ ಬೇಸಾಯದ ರೀತಿ
  • ಸಮುದ್ರಮಟ್ಟದಿಂದ 300 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕೋಕೋ ಬೀಜಗಳನ್ನು ಉತ್ಪಾದಿಸಲಾಗುತ್ತದೆ. ಪ್ರತಿ ತಿಂಗಳು 90 ರಿಂದ 100 ಮಿಲಿ ಮೀಟರ್ ಮಳೆಯ ಅವಶ್ಯಕತೆ ಇರುತ್ತದೆ. ಪ್ರತಿವರ್ಷ ಸರಾಸರಿ 1,500 ರಿಂದ 2,000 ಮಿಲಿ ಮೀಟರ್ ಮಳೆಯ ಅವಶ್ಯಕತೆ ಇರುತ್ತದೆ.

  • ಕೋಕೋ ಬೀಜಗಳನ್ನು ಉತ್ಪಾದಿಸಲು 15 ರಿಂದ 39 ಡಿಗ್ರಿ ಸೆಲ್ಸಿಯಸ್ ತಾಪಮಾನದ ಅವಶ್ಯಕತೆ ಇರುತ್ತದೆ. 25 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ ಅದನ್ನು ಮಾದರಿ ತಾಪಮಾನ ಎಂದು ಪರಿಗಣಿಸಬಹುದು.

  • ಸ್ವಾಭಾವಿಕವಾಗಿ ಜೇಡಿ ಮಣ್ಣು ಮತ್ತು ಮರಳು ಮಿಶ್ರಿತ ಮಣ್ಣಿನ ಪ್ರದೇಶಗಳಲ್ಲಿ ಕೋಕೋ ಬೀಜಗಳನ್ನು ಹೆಚ್ಚಾಗಿ ಉತ್ಪಾದಿಸಬಹುದು.

  • ಕೋಕೋ ಮರಗಳು ನೆರಳಿನಲ್ಲಿ ಬೆಳೆಯುವ ಮರಗಳಾಗಿದ್ದು, ಎತ್ತರದ ಮರಗಳ ಅಡಿಯಲ್ಲಿ ಇವುಗಳನ್ನು  ನೆಡಲಾಗುತ್ತದೆ

ಭಾರತದಲ್ಲಿ ಕೋಕೋ ಉತ್ಪಾದನೆ
  • ಭಾರತದಲ್ಲಿ ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಕೋಕೋ ಮರಗಳನ್ನು ಹೆಚ್ಚಾಗಿ ನೆಡಲಾಗಿದ್ದು, ಪ್ರಮುಖವಾಗಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಬೆಳೆಯಲಾಗುತ್ತದೆ.

  • ರಾಷ್ಟ್ರೀಯ ತೋಟಗಾರಿಕೆ ಅಭಿಯಾನದ ಅಡಿಯಲ್ಲಿ ಆಂಧ್ರಪ್ರದೇಶದ ಕೋಕೋ ಬೆಳೆಗಾರರಿಗೆ ಕೇಂದ್ರ ಸರ್ಕಾರದ ವತಿಯಿಂದ ಮೊದಲ ಮೂರು ವರ್ಷಗಳವರೆಗೂ ಪ್ರತಿ ಹೆಕ್ಟೇರ್ ಗೆ 20,000 ಸಹಾಯಧನವನ್ನು ಕಲ್ಪಿಸಲಾಗುತ್ತಿದೆ.

  • ಭಾರತದಲ್ಲಿ ಕೋಕೋ ಬೇಸಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯು ಸಂಶೋಧನಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಕೂಡ ಕೋಕೋ ಬೀಜಗಳ ಉತ್ಪಾದನೆ ಹೆಚ್ಚಾಗಬಹುದು.

ಅಂತರರಾಷ್ಟ್ರೀಯ ಕೋಕೋ ಸಂಸ್ಥೆ
  • ಈ ಸಂಸ್ಥೆಯನ್ನು 1973ರಲ್ಲಿ ವಿಶ್ವಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಲಾಯಿತು.

  • ಮುಖ್ಯ ಕಚೇರಿ - ಐವರಿ ಕೋಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.