ADVERTISEMENT

ದೇಶದ ಸಾವಿರ ನಗರಗಳಲ್ಲಿ 5ಜಿ ಸೇವೆಗೆ ಜಿಯೊ ಸಜ್ಜು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 5:49 IST
Last Updated 9 ಆಗಸ್ಟ್ 2022, 5:49 IST
   

ಬೆಂಗಳೂರು: ದೇಶದ ಒಂದು ಸಾವಿರ ನಗರಗಳಲ್ಲಿ 5ಜಿ ದೂರಸಂಪರ್ಕ ಸೇವೆಗಳನ್ನು ಒದಗಿಸಲು ಯೋಜನೆ ಪೂರ್ಣಗೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ದೂರಸಂಪರ್ಕ ಸೇವೆಗಳನ್ನು ಒದಗಿಸುವ ಜಿಯೊ ಕಂಪನಿಯು ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಂಗಸಂಸ್ಥೆ.

‘ಜಿಯೊ ಮೊಬೈಲ್‌ ದೂರಸಂಪರ್ಕ ನೆಟ್‌ವರ್ಕ್‌ಅನ್ನು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗಿದೆ. ಈ ಕಾರಣದಿಂದ 4ಜಿ ಸೇವೆಗಳನ್ನು ಸುಲಲಿತವಾಗಿ 5ಜಿ ಸೇವೆಗಳಿಗೆ ಮೇಲ್ದರ್ಜೆಗೆ ಏರಿಸಲು ಸಾಧ್ಯವಾಗಲಿದೆ’ ಎಂದು ಕಂಪನಿಯು ಹೇಳಿದೆ.

ADVERTISEMENT

ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ 5ಜಿ ಉಪಕರಣಗಳನ್ನು ಹೊಂದಿರುವುದಾಗಿಯೂ ಕಂಪನಿಯು ವಾರ್ಷಿಕ ವರದಿಯಲ್ಲಿ ತಿಳಿಸಿದೆ.

‘ನಗರಗಳಲ್ಲಿ 5ಜಿ ಸೇವೆ ಆರಂಭಗೊಂಡ ತಕ್ಷಣಕ್ಕೆ, ತೀರಾ ದೂರದ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ 5ಜಿ ಸೇವೆ ಆರಂಭ ಆಗದಿರಬಹುದು. ಹಂತ ಹಂತವಾಗಿ ಅಲ್ಲಿಯೂ ಸೇವೆಗಳು ಆರಂಭವಾಗುತ್ತವೆ. ಜಿಯೊ ಎಲ್ಲೆಲ್ಲಿ 4ಜಿ ಸೇವೆಗಳನ್ನು ಒದಗಿಸುತ್ತಿದೆಯೋ ಅಲ್ಲೆಲ್ಲ 5ಜಿ ಸೇವೆಗಳು ಲಭ್ಯವಾಗುವುದು ಖಚಿತ. 5ಜಿ ಸೇವೆ ಒದಗಿಸಲು ಮೊದಲೇ ಸಿದ್ಧವಾಗಿದ್ದೆವು’ ಎಂದು ಕಂಪನಿಯ ಮೂಲಗಳು ತಿಳಿಸಿವೆ.

‘ಡೇಟಾ ಬಳಕೆಯು ಎಲ್ಲಿ ಜಾಸ್ತಿ ಇದೆಯೋ ಅಲ್ಲಿ 5ಜಿ ಸೇವೆಗಳು ಮೊದಲಿಗೆ ಆರಂಭವಾಗಲಿವೆ’ ಎಂದು ಮೂಲಗಳು ವಿವರಿಸಿವೆ.

‘ಒಂದು ತಿಂಗಳಲ್ಲಿ ಆರಂಭ ಸಾಧ್ಯತೆ’
ನವದೆಹಲಿ: 5ಜಿ ಸೇವೆಗಳು ಸರಿಸುಮಾರು ಒಂದು ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿಂಹ ಚೌಹಾನ್ ಸೋಮವಾರ ಹೇಳಿದ್ದಾರೆ.

5ಜಿ ಸೇವೆಗಳನ್ನು ಒದಗಿಸಲು ದೇಶೀಯವಾಗಿ ಅಭಿವೃದ್ಧಿಪಡಿಸಿದ ಉಪಕರಣಗಳನ್ನು ಅಳವಡಿಸುವ ಸಾಧ್ಯತೆ ಇದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.