ADVERTISEMENT

ಜೀವನ್‌ ಪ್ರಮಾಣ್‌ಗೆ ಆಧಾರ್‌ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ಪಿಟಿಐ
Published 21 ಮಾರ್ಚ್ 2021, 15:58 IST
Last Updated 21 ಮಾರ್ಚ್ 2021, 15:58 IST
ಆಧಾರ್‌
ಆಧಾರ್‌   

ನವದೆಹಲಿ: ಪಿಂಚಣಿ ಪಡೆಯುತ್ತಿರುವವರು ಜೀವಿತ ಪ್ರಮಾಣಪತ್ರವನ್ನು (ಜೀವನ್ ಪ್ರಮಾಣ್) ಡಿಜಿಟಲ್ ಸ್ವರೂಪದಲ್ಲಿ ಪಡೆದುಕೊಳ್ಳಲು ಇನ್ನು ಮುಂದೆ ಆಧಾರ್‌ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಲ್ಲದೆ ಕೇಂದ್ರ ಸರ್ಕಾರವು ತಾನು ರೂಪಿಸಿರುವ ‘ಸಂದೇಶ್’ ಆ್ಯಪ್‌ ಬಳಕೆಗೆ ಆಧಾರ್‌ ಸಂಖ್ಯೆ ನೀಡುವುದನ್ನು ಐಚ್ಛಿಕಗೊಳಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಹಾಜರಿ ನಿರ್ವಹಣಾ ವ್ಯವಸ್ಥೆಯ ಅಡಿಯೂ ಆಧಾರ್‌ ಬಳಕೆಯನ್ನು ಐಚ್ಛಿಕಗೊಳಿಸಲಾಗಿದೆ.

ಆಧಾರ್ ಸಂಖ್ಯೆ ಇಲ್ಲದಿರುವ, ಬೆರಳಚ್ಚನ್ನು ಗುರುತಿಸಲು ಸಾಧ್ಯವಾಗದ ಪರಿಣಾಮವಾಗಿ ಪಿಂಚಣಿ ಪಡೆಯಲು ಕಷ್ಟವಾಗುತ್ತಿದೆ ಎಂದು ಹಲವರು ದೂರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.