ADVERTISEMENT

ಹುಟ್ಟುಹಬ್ಬದ ಅಂಗವಾಗಿ ₹60 ಸಾವಿರ ಕೋಟಿ ದಾನ ನೀಡಲು ಮುಂದಾದ ಅದಾನಿ

ಪಿಟಿಐ
Published 23 ಜೂನ್ 2022, 19:02 IST
Last Updated 23 ಜೂನ್ 2022, 19:02 IST
ಉದ್ಯಮಿ ಗೌತಮ್ ಅದಾನಿ
ಉದ್ಯಮಿ ಗೌತಮ್ ಅದಾನಿ    

ನವದೆಹಲಿ (ಪಿಟಿಐ): ಏಷ್ಯಾದ ಅತ್ಯಂತ ಶ್ರೀಮಂತ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಕುಟುಂಬವು ₹ 60 ಸಾವಿರ ಕೋಟಿಯನ್ನು ದಾನವಾಗಿ ನೀಡುವುದಾಗಿ ಹೇಳಿದೆ. ಗೌತಮ್ ಅದಾನಿ ಅವರು ತಮ್ಮ 60ನೆಯ ಹುಟ್ಟುಹಬ್ಬದ ಅಂಗವಾಗಿ ಈ ದಾನಕ್ಕೆ ಮುಂದಾಗಿದ್ದಾರೆ.

ದಾನವಾಗಿ ನೀಡುವ ಈ ಹಣವನ್ನು ಆರೋಗ್ಯಸೇವೆ, ಶಿಕ್ಷಣ, ಕೌಶಲ ಅಭಿವೃದ್ಧಿ ವಲಯಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಅದಾನಿ ಸಮೂಹ ಪ್ರಕಟಣೆಯಲ್ಲಿ ತಿಳಿಸಿದೆ. ಅದಾನಿ ಅವರು ಶುಕ್ರವಾರ 60ನೆಯ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ದಾನವಾಗಿ ನೀಡುವುದಾಗಿ ಹೇಳಿರುವ ಮೊತ್ತವು ಅದಾನಿ ಅವರ ಒಟ್ಟು ಸಂಪತ್ತಿನ ಶೇಕಡ 8ಕ್ಕಿಂತ ತುಸು ಹೆಚ್ಚು. ಇದು ದೇಶದ ಕಾರ್ಪೊರೇಟ್ ಇತಿಹಾಸದಲ್ಲಿನ ಅತಿದೊಡ್ಡ ದಾನಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT