ADVERTISEMENT

₹ 7,374 ಕೋಟಿ ಸಾಲ ತೀರಿಸಿದ ಅದಾನಿ ಸಮೂಹ

ಪಿಟಿಐ
Published 7 ಮಾರ್ಚ್ 2023, 16:05 IST
Last Updated 7 ಮಾರ್ಚ್ 2023, 16:05 IST
   

ನವದೆಹಲಿ (ಪಿಟಿಐ): ಷೇರು ಅಡ ಇರಿಸಿ ಪಡೆದಿದ್ದ ಸಾಲದಲ್ಲಿ ₹ 7,373 ಕೋಟಿಯನ್ನು ಮರುಪಾವತಿ ಮಾಡಲಾಗಿದೆ ಎಂದು ಅದಾನಿ ಸಮೂಹ ಮಂಗಳವಾರ ಹೇಳಿದೆ. ಅಲ್ಲದೆ, ಷೇರು ಅಡ ಇರಿಸಿ ಪಡೆದ ಬಾಕಿ ಸಾಲವನ್ನು ಈ ತಿಂಗಳ ಅಂತ್ಯದೊಳಗೆ ತೀರಿಸಲಾಗುತ್ತದೆ ಎಂದು ಕೂಡ ಹೇಳಿದೆ.

ಕ್ರೆಡಿಟ್ ಸೈಟ್ಸ್ ಸಂಸ್ಥೆಯು ಸೆಪ್ಟೆಂಬರ್ ತಿಂಗಳಿನಲ್ಲಿ, ಅದಾನಿ ಸಮೂಹವು ಭಾರಿ ಸಾಲದಲ್ಲಿದೆ ಎಂದು ಹೇಳಿತ್ತು. ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವರದಿ ಕೂಡ, ಅದಾನಿ ಸಮೂಹದ ಸಾಲವು ಗಣನೀಯ ಪ್ರಮಾಣದಲ್ಲಿ ಇದೆ ಎಂದು ಹೇಳಿದೆ.

ಅದಾನಿ ಸಮೂಹದ ಒಟ್ಟು ಸಾಲದ ಮೊತ್ತವು ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿದೆ. 2019ರಲ್ಲಿ ಸಮೂಹದ ಸಾಲವು ₹ 1.11 ಲಕ್ಷ ಕೋಟಿ ಆಗಿತ್ತು. ಈ ವರ್ಷದಲ್ಲಿ ಅದು ₹ 2.21 ಲಕ್ಷ ಕೋಟಿ ಆಗಿದೆ ಎಂದು ಕಳೆದ ತಿಂಗಳು ಹೂಡಿಕೆದಾರರಿಗೆ ನೀಡಿದ ಮಾಹಿತಿಯಲ್ಲಿ ಹೇಳಲಾಗಿದೆ.

ADVERTISEMENT

ಆದರೆ, ಸಮೂಹದ ಬಳಿಯಲ್ಲಿ ಇರುವ ಹಣವನ್ನು ಪರಿಗಣಿಸಿದರೆ, ನಿವ್ವಳ ಸಾಲದ ಮೊತ್ತವು ₹ 1.89 ಲಕ್ಷ ಕೋಟಿ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.