ADVERTISEMENT

ರಿಲಯನ್ಸ್ ಕ್ಯಾಪಿಟಲ್‌ ಖರೀದಿಗೆ ಅದಾನಿ, ಕೆಕೆಆರ್‌, ಪಿರಾಮಲ್‌ ಆಸಕ್ತಿ

ಪಿಟಿಐ
Published 13 ಮಾರ್ಚ್ 2022, 14:34 IST
Last Updated 13 ಮಾರ್ಚ್ 2022, 14:34 IST

ನವದೆಹಲಿ: ಸಾಲದ ಸುಳಿಗೆ ಸಿಲುಕಿರುವ ರಿಲಯನ್ಸ್‌ ಕ್ಯಾಪಿಟಲ್‌ ಲಿಮಿಟೆಡ್‌ ಅನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಅದಾನಿ ಫಿನ್‌ಸರ್ವ್‌, ಕೆಕೆಆರ್‌, ಪಿರಾಮಲ್‌ ಫೈನಾನ್ಸ್‌ ಸೇರಿದಂತೆ ಒಟ್ಟು 14 ಕಂಪ‍ನಿಗಳು ಆಸಕ್ತಿ ತೋರಿಸಿವೆ.

ಕಂಪನಿಯನ್ನು ಖರೀದಿಸಲು ಆಸಕ್ತಿ ತಿಳಿಸುವ ಬಗ್ಗೆ ಈ ಹಿಂದೆ ಮಾರ್ಚ್‌ 11ರ ಗಡುವು ನೀಡಲಾಗಿತ್ತು. ಬಳಿಕ ಅದನ್ನು ಮಾರ್ಚ್‌ 25ರವರೆಗೆ ವಿಸ್ತರಣೆ ಮಾಡಲಾಗಿದೆ.

ಆಡಳಿತಾತ್ಮಕ ವೈಫಲ್ಯ ಮತ್ತು ಸಾಲ ಮರುಪಾವತಿಸದ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಯ) ಕಳೆದ ವರ್ಷದ ನವೆಂಬರ್ 29ರಂದು ರಿಲಯನ್ಸ್‌ ಕ್ಯಾಪಿಟಲ್‌ನ ಆಡಳಿತ ಮಂಡಳಿಯನ್ನು ಅಮಾನತು ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.