
ಪಿಟಿಐ
ನವದೆಹಲಿ: ಅದಾನಿ ಸಮೂಹದ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಜೋನ್ ಮತ್ತು ಅದಾನಿ ಎನರ್ಜಿ ಸಲ್ಯೂಷನ್ಸ್ ಕಂಪನಿಗಳಿಗೆ ನೀಡಿದ್ದ ಮುನ್ನೋಟವನ್ನು ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ ಪರಿಷ್ಕರಿಸಿದೆ.
ಈ ಮೊದಲು ಫಿಚ್, ಈ ಕಂಪನಿಗಳನ್ನು ‘ಋಣಾತ್ಮಕ’ ಪಟ್ಟಿಗೆ ಸೇರಿಸಿತ್ತು. ಈಗ ಅದನ್ನು ಪರಿಷ್ಕರಿಸಿದ್ದು ‘ಸ್ಥಿರ’ ರೇಟಿಂಗ್ಸ್ ಪಟ್ಟಿಗೆ ಸೇರಿಸಿದೆ. ಫಿಚ್ ಎರಡೂ ಕಂಪನಿಗಳಿಗೆ ನೀಡಿರುವ ದೀರ್ಘಾವಧಿಯ ರೇಟಿಂಗ್‌ಅನ್ನು ‘ಬಿಬಿಬಿ–’ ಮಟ್ಟದಲ್ಲಿ ಉಳಿಸಿಕೊಂಡಿದೆ.
ಈ ಎರಡೂ ಕಂಪನಿಗಳು ಅಗಾಧ ಪ್ರಮಾಣದಲ್ಲಿ ಹಣದ ಹರಿವನ್ನು ಹೊಂದಿವೆ. ದೇಶ ಮತ್ತು ಸಾಗರೋತ್ತರ ಸಾಲದಾತರಿಂದ 2024ರ ಅಂತ್ಯದಿಂದ ಅದಾನಿ ಸಮೂಹವು ₹2.12 ಲಕ್ಷ ಕೋಟಿ ಸಾಲ ಪಡೆದಿದೆ.
ಈ ಮುನ್ನೋಟದ ಪರಿಷ್ಕರಣೆಯು ಅದಾನಿ ಸಮೂಹವು ಅಪಾಯ ಎದುರಿಸುವ ಪ್ರಮಾಣ ಕಡಿಮೆ ಆಗಿರುವುದನ್ನು ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.