ಬೆಂಗಳೂರು: ಅಡಿಗಾಸ್ ಯಾತ್ರಾ ಕಂಪನಿಯು ಪಿತೃ ಪಕ್ಷದ ಅಂಗವಾಗಿ ಧಾರ್ಮಿಕ ಯಾತ್ರೆಯನ್ನು ಆಯೋಜಿಸಿದೆ.
ಯಾತ್ರೆಯು ಎರಡು ಆಯ್ಕೆಗಳನ್ನು ಒಳಗೊಂಡಿದೆ. ಕಾಶಿ, ಗಯಾ, ಪ್ರಯಾಗ, ಅಯೋಧ್ಯೆ, ಚಿತ್ರಕೂಟ ಮತ್ತು ನೈಮಿಷಾರಣ್ಯ ಒಂದನೆಯ ಆಯ್ಕೆ. ಇದು 9 ದಿನಗಳ ಯಾತ್ರೆ. ಕಾಶಿ, ಗಯಾ, ಪ್ರಯಾಗ ಮತ್ತು ಅಯೋಧ್ಯೆ ಎರಡನೆಯ ಆಯ್ಕೆ. ಇದು 6 ದಿನಗಳ ಯಾತ್ರೆ.
ಯಾತ್ರೆಯಲ್ಲಿ ಕ್ಷೇತ್ರ ಪುರೋಹಿತರಿಂದ ಧಾರ್ಮಿಕ ವಿಧಿ ವಿಧಾನ ಮತ್ತು ಆಚರಣೆಗಳನ್ನು ನಡೆಸಿಕೊಡಲು ವ್ಯವಸ್ಥೆ ಮಾಡಿಕೊಡಲಾಗುವುದು. ಯಾತ್ರಾ ವ್ಯವಸ್ಥಾಪಕರು ಜೊತೆಯರಲ್ಲಿದ್ದು, ಸ್ಥಳೀಯ ಮಾರ್ಗದರ್ಶಕರು ಮಾಹಿತಿ ನೀಡಲಿದ್ದಾರೆ ಎಂದು ಕಂಪನಿಯ ಸಂಸ್ಥಾಪಕ ಕೆ.ನಾಗರಾಜ್ ಅಡಿಗ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ಬುಕಿಂಗ್‌ಗಾಗಿ 080-26616678, 94494 78944, 70222 59008, 93641 04373 ಸಂಖ್ಯೆಗಳಿಗೆ ಕರೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.