ADVERTISEMENT

ಅಡಿಗಾಸ್‌ ಯಾತ್ರಾದಿಂದ ಭಾರತ ದರ್ಶನ ಪ್ರವಾಸ ಯೋಜನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 14:09 IST
Last Updated 17 ಜೂನ್ 2020, 14:09 IST
ಭಾರತ ಪ್ರವಾಸ– ಸಾಂದರ್ಭಿಕ ಚಿತ್ರ
ಭಾರತ ಪ್ರವಾಸ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಅಡಿಗಾಸ್ ಯಾತ್ರಾ, ಪ್ರವಾಸ ಆಸಕ್ತರಿಗಾಗಿ ಸದಸ್ಯತ್ವ ಕಾರ್ಡ್‌ ಮತ್ತು ಭಾರತ ದರ್ಶನ ಯೋಜನೆ ಪರಿಚಯಿಸಿದೆ.

ಸದಸ್ಯತ್ವ ಕಾರ್ಡ್‌:ಅಡಿಗಾಸ್‌ ಸಂಸ್ಥೆಯಲ್ಲಿ ಈ ಹಿಂದೆ ಪ್ರಯಾಣಿಸಿದ್ದ ಪ್ರತಿಯೊಬ್ಬರಿಗೂ ಸಂಪೂರ್ಣ ಉಚಿತವಾದ 5 ವರ್ಷ ಅವಧಿಯ ಸದಸ್ಯತ್ವ ಕಾರ್ಡ್‌ ಕೊಡಲಾಗುತ್ತದೆ. ಈ ಯೋಜನೆಯಡಿ ಎಷ್ಟು ಬಾರಿ, ಎಲ್ಲಿಗೇ ಆದರೂ ಪ್ರವಾಸ ಮಾಡಬಹುದು. ಭಾರತ ದೇಶದ ಹಾಗೂ ವಿದೇಶ ಪ್ರವಾಸಗಳಲ್ಲಿಯೂ ರಿಯಾಯಿತಿ ಪಡೆದುಕೊಳ್ಳಬಹುದು.

ಭಾರತ ದರ್ಶನ ಯೋಜನೆ: ದೇಶದಾದ್ಯಂತ ಇರುವ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸೋದ್ಯಮಗಳು, ಸ್ಥಳೀಯ ಗೈಡ್‌, ಹೋಟೆಲ್‌, ಸಾರಿಗೆ ವ್ಯವಸ್ಥೆ ಪೋಷಿಸುವ ಮತ್ತು ತೆರಿಗೆ ರೂಪದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸುವ ಯೋಜನೆ ಇದಾಗಿದೆ. ಪ್ರವಾಸಿಗರಿಗೆ ಭಾರಿ ರಿಯಾಯಿತಿ ಸಿಗಲಿದೆ.

ADVERTISEMENT

‘ಪ್ರೇಕ್ಷಣೀಯ ಸ್ಥಳಗಳು ಅತಿ ಶೀಘ್ರದಲ್ಲೇ ಪ್ರವಾಸಿಗರಿಗೆ ತೆರೆಯಲಿವೆ. ಸರ್ಕಾರದಿಂದ ಒಪ್ಪಿಗೆ ದೊರೆತ ತಕ್ಷಣ ಅನುಕೂಲಕರವಾದ ದಿನ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದು ನಿರ್ದೇಶಕ ಕೆ. ನಾಗರಾಜ ಅಡಿಗ ಅವರು ತಿಳಿಸಿದ್ದಾರೆ.

ಮಾಹಿತಿಗೆ:96116 00810 / 70222 59003 ಅಥವಾ www.adigasyatra.comಗೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.