ನವದೆಹಲಿ: ಗ್ರಾಹಕ ಬಳಕೆ ಸರಕುಗಳು ಮತ್ತು ವೈಮಾನಿಕ ಬಿಡಿಭಾಗಗಳನ್ನು ಗುತ್ತಿಗೆ ಆಧಾರದಲ್ಲಿ ತಯಾರಿಕೆ ಮಾಡುವ ಏಕ್ಯುಸ್ ಕಂಪನಿಯು ತನ್ನ ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಲು ಬಯಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿದೆ.
ಐಪಿಒ ಮೂಲಕ ಅಂದಾಜು ₹1,700 ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಕಂಪನಿಯು ಹೊಂದಿದೆ ಎಂದು ಮೂಲಗಳು ಹೇಳಿವೆ. ಐಪಿಒ ಪ್ರಕ್ರಿಯೆಯನ್ನು ಕೋಟಕ್ ಮಹೀಂದ್ರ ಕ್ಯಾಪಿಟಲ್, ಜೆಎಂ ಫೈನಾನ್ಸಿಯಲ್ ಮತ್ತು ಐಐಎಫ್‌ಎಲ್ ಕ್ಯಾಪಿಟಲ್ ನಿರ್ವಹಿಸಲಿವೆ.
ಕಂಪನಿಯು ಭಾರತ, ಅಮೆರಿಕ ಮತ್ತು ಫ್ರಾನ್ಸ್‌ನಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ. ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ ಮತ್ತು ಕೊಪ್ಪಳದಲ್ಲಿ ತಯಾರಿಕಾ ಕ್ಲಸ್ಟರ್‌ಗಳನ್ನು ನಿರ್ವಹಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.