ADVERTISEMENT

ವೋಕಲ್ ಫಾರ್ ಲೋಕಲ್ | ಟಿ.ವಿ. ಆಮದಿಗೆ ನಿರ್ಬಂಧ: ಚೀನಾಗೆ ಮತ್ತೊಂದು ಹೊಡೆತ?

ಪಿಟಿಐ
Published 31 ಜುಲೈ 2020, 14:52 IST
Last Updated 31 ಜುಲೈ 2020, 14:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಚೀನಾದ ಜನಪ್ರಿಯ ಮೊಬೈಲ್‌ ಆ್ಯಪ್‌ಗಳ ಮೇಲೆ ನಿಷೇಧ ಹೇರಿದ ಬಳಿಕ ಇದೀಗ ಕಲರ್ ಟಿ.ವಿ. ಆಮದು ಮೇಲೆ ಭಾರತ ಸರ್ಕಾರ ನಿರ್ಬಂಧ ವಿಧಿಸಿದೆ.

ದೇಶಿ ಟಿ.ವಿ. ತಯಾರಕರನ್ನು ಪ್ರೋತ್ಸಾಹಿಸುವ ಹಾಗೂ ಟಿ.ವಿ.ಯಂತಹ ತೀರಾ ಅಗತ್ಯವಲ್ಲದ ವಸ್ತುಗಳನ್ನು ಚೀನಾದಂತಹ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವ ಉದ್ದೇಶ ಈ ಕ್ರಮದ ಹಿಂದಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ವೋಕಲ್ ಫಾರ್ ಲೋಕಲ್ ಕರೆಗೆ ಒತ್ತು ನೀಡಿದಂತಾಗಲಿದೆ.

ಕಲರ್‌ ಟಿ.ವಿ.ಗೆ ಸಂಬಂಧಿಸಿದ ಆಮದು ನೀತಿಯಲ್ಲಿ ತಿದ್ದುಪಡಿ ತರಲಾಗಿದ್ದು, ಅದನ್ನು ಮುಕ್ತ ವರ್ಗದಿಂದ, ನಿರ್ಬಂಧಿತ ವರ್ಗಕ್ಕೆ ತರಲಾಗಿದೆ. ಈ ವರ್ಗದಲ್ಲಿ ಇರುವ ವಸ್ತುಗಳನ್ನು ಆಮದು ಮಾಡಿಕೊಳ್ಳುವವರು ಅದಕ್ಕೆ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ ಎಂದು ವಿದೇಶ ವಹಿವಾಟುಗಳ ಮಹಾನಿರ್ದೇಶನಾಲಯ ಹೇಳಿದೆ.

ADVERTISEMENT

ಭಾರತಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಟಿ.ವಿ.ಗಳನ್ನು ರಫ್ತು ಮಾಡುವ ದೇಶ ಚೀನಾ. ನಂತರದ ಸ್ಥಾನಗಳಲ್ಲಿ ವಿಯೆಟ್ನಾಂ, ಮಲೇಷ್ಯಾ, ಹಾಂಗ್‌ಕಾಂಗ್‌, ಕೊರಿಯಾ, ಇಂಡೊನೇಷ್ಯಾ, ಥಾಯ್ಲೆಂಡ್ ಮತ್ತು ಜರ್ಮನಿ ದೇಶಗಳು ಸೇರಿವೆ.

ಆಮದು ಮಾಡಿಕೊಳ್ಳುವ ಕಲರ್ ಟಿವಿ ನಿರ್ಬಂಧದ ತಿದ್ದುಪಡಿಯಿಂದ 36 ಸೆಂ.ಮೀಟರ್ ನಿಂದ 105 ಸೆಂ.ಮೀ ತನಕದ ಟಿವಿಗಳ ಮೇಲೆ ನಿರ್ಬಂಧ ವಿಧಿಸಿರುವುದಾಗಿ ವಿದೇಶ ವಹಿವಾಟುಗಳ ಮಹಾನಿರ್ದೇಶನಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.