ADVERTISEMENT

ಕೋವಿಡ್‌ ಪೂರ್ವ ಸ್ಥಿತಿಯತ್ತ ಡೀಸೆಲ್‌ ಬೇಡಿಕೆ

ಪಿಟಿಐ
Published 16 ಅಕ್ಟೋಬರ್ 2020, 14:32 IST
Last Updated 16 ಅಕ್ಟೋಬರ್ 2020, 14:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಡೀಸೆಲ್‌ ಬೇಡಿಕೆಯು ಕೋವಿಡ್‌–19 ಪಿಡುಗಿಗೂ ಮೊದಲಿನ ಮಟ್ಟಕ್ಕೆ ಮರಳುತ್ತಿದೆ ಎಂದು ಉದ್ಯಮ ವಲಯ ಮಾಹಿತಿ ನೀಡಿದೆ.

ಅಕ್ಟೋಬರ್‌ 1ರಿಂದ 15ರವರೆಗಿನ ಅವಧಿಯಲ್ಲಿ ಡೀಸೆಲ್‌ ಮಾರಾಟ ಶೇ 8.8ರಷ್ಟು ಹೆಚ್ಚಾಗಿದ್ದು 26.5 ಲಕ್ಷ ಟನ್‌ಗಳಿಗೆ ತಲುಪಿದೆ. ಸೆಪ್ಟೆಂಬರ್‌ 1ರಿಂದ 15 ದಿನಗಳ ಅವಧಿಯಲ್ಲಿ 21.3 ಲಕ್ಷ ಟನ್‌ ಮಾರಾಟವಾಗಿತ್ತು. 2019ರ ಇದೇ ಅವಧಿಯಲ್ಲಿ 24.3 ಲಕ್ಷ ಟನ್‌ ಮಾರಾಟವಾಗಿತ್ತು. ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಡೀಸೆಲ್‌ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಕೋವಿಡ್‌ಗೂ ಮುಂಚಿನ ಸ್ಥಿತಿಗೆ ಸೆಪ್ಟೆಂಬರ್‌ನಲ್ಲಿ ಮರಳಿದ್ದ ಪೆಟ್ರೋಲ್‌ ಮಾರಾಟ ಅಕ್ಟೋಬರ್‌ 1 ರಿಂದ 15ರವರೆಗಿನ ಅವಧಿಯಲ್ಲಿ ಶೇ 1.5ರಷ್ಟು ಹೆಚ್ಚಾಗಿದ್ದು, 9.82 ಲಕ್ಷ ಟನ್‌ಗಳಷ್ಟಾಗಿದೆ. 2019ರ ಅಕ್ಟೋಬರ್‌ನ ಇದೇ ಅವಧಿಯಲ್ಲಿ 9.67 ಲಕ್ಷ ಟನ್‌ಗಳಷ್ಟಿತ್ತು.

ADVERTISEMENT

ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸುತ್ತಿರುವುದು ಹಾಗೂ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿರುವುದರಿಂದಾಗಿ ಇಂಧನ ಬೇಡಿಕೆಯು ಸಹಜ ಸ್ಥಿತಿಯತ್ತ ಮರಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.