ADVERTISEMENT

₹ 26 ಸಾವಿರ ಕೋಟಿಗೆ ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿ ಅದಾನಿ ತೆಕ್ಕೆಗೆ

ಪಿಟಿಐ
Published 4 ಅಕ್ಟೋಬರ್ 2021, 5:29 IST
Last Updated 4 ಅಕ್ಟೋಬರ್ 2021, 5:29 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

ನವದೆಹಲಿ: ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ (ಎಜಿಇಎಲ್‌) ಕಂಪನಿಯು ₹26 ಸಾವಿರ ಕೋಟಿಗೆ (3.5 ಶತಕೋಟಿ ಡಾಲರ್) ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ.

‘ಜಗತ್ತಿನ ಅತಿದೊಡ್ಡ ಸೌರ ವಿದ್ಯುತ್‌ ಅಭಿವೃದ್ಧಿ ಕಂಪನಿಯಾದ ಎಜಿಇಎಲ್‌ ಯಶಸ್ವಿಯಾಗಿ ಎಸ್‌ಬಿ ಎನರ್ಜಿ ಹೋಲ್ಡಿಂಗ್ಸ್‌ ಲಿಮಿಟೆಡ್‌ (ಎಸ್‌ಬಿ ಎನರ್ಜಿ ಇಂಡಿಯಾ) ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ. ಎಲ್ಲಾ ನಗದು ವ್ಯವಹಾರವನ್ನೇ ಒಳಗೊಂಡ ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ಮೇ 8ರಂದೇ ಖಚಿತಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈ ವ್ಯವಹಾರದಿಂದಾಗಿ ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿಯು ಅದಾನಿ ಕಂಪನಿಯ ಶೇ 100ರಷ್ಟು ಸಹೋದರಿ ಕಂಪನಿಯಾಗಿದೆ. ಈ ಹಿಂದೆ ಇದು ಜಪಾನ್ ಮೂಲದ ಸಾಫ್ಟ್‌ಬ್ಯಾಂಕ್‌ ಗ್ರೂಪ್‌ ಕಾರ್ಪ್‌ ಮತ್ತು ಭಾರ್ತಿ ಗ್ರೂಪ್‌ಗಳ 80:20 ಪಾಲುದಾರಿಕೆಯ ಕಂಪನಿಯಾಗಿತ್ತು.

ADVERTISEMENT

ಮುಂದಿನ ಹತ್ತು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 20 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಅದಾನಿ ಗುಂಪಿನ ಅಧ್ಯಕ್ಷ ಗೌತಮ್‌ ಅದಾನಿ ಅವರು ಕಳೆದ ವಾರ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.