ADVERTISEMENT

ಏರ್‌ಬಸ್‌ ‘ಎ350’ ವಿಮಾನ ಖರೀದಿಗೆ ಏರ್‌ಇಂಡಿಯಾ ನಿರ್ಧಾರ

ಪಿಟಿಐ
Published 16 ಜೂನ್ 2022, 11:06 IST
Last Updated 16 ಜೂನ್ 2022, 11:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಟಾಟಾ ಸಮೂಹ ಒಡೆತನದ ಏರ್‌ ಇಂಡಿಯಾ, ಏರ್‌ಬಸ್‌ ನಿರ್ಮಿತ ವಿಮಾನಗಳನ್ನು (ಎ350) ಖರೀದಿಸಲು ನಿರ್ಧರಿಸಿದೆ. ಮುಂದಿನ ಮಾರ್ಚ್‌ ವೇಳೆಗೆ ಮೊದಲ ವಿಮಾನವು ಸಂಸ್ಥೆಯನ್ನು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಏರ್‌ ಇಂಡಿಯಾ ಖರೀದಿಸಲಿರುವ ವಿಮಾನಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇವೇ ಮೂಲಗಳು ಹೇಳಿವೆ.

ಏರ್‌ಬಸ್ ಎ350 ವಿಮಾನ ಬೃಹತ್‌ ಗಾತ್ರದ ಇಂಧನ ಟ್ಯಾಂಕ್‌ ಹೊಂದಿರುತ್ತದೆ. ಭಾರತದಿಂದ ಅಮೆರಿಕ ಸೇರಿದಂತೆ ದೂರದ ಪ್ರಯಾಣಕ್ಕೆ ಇದರಿಂದ ಅನುಕೂಲವಾಗಲಿದೆ.

ADVERTISEMENT

2006ರಲ್ಲಿ ಏರ್‌ ಇಂಡಿಯಾ ಒಟ್ಟು 111 ವಿಮಾನಗಳನ್ನು ಖರೀದಿಸಿತ್ತು. ಅಮೆರಿಕದ ಬೋಯಿಂಗ್‌ 68 ಹಾಗೂ ಯುರೋಪ್‌ನ ಏರ್‌ಬಸ್ 43 ವಿಮಾನಗಳನ್ನು ಪೂರೈಸಿದ್ದವು. ನಂತರ, ಸಂಸ್ಥೆಯು ಏರ್‌ಬಸ್‌ನ ವಿಮಾನಗಳನ್ನು ಖರೀದಿ ಮಾಡಿರಲಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.