
ಬೆಂಗಳೂರು: ದೇಶದ ವಿಮಾನಯಾನ ಕಂಪನಿ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎನ್‌ಎಂಐಎ) ಗುರುವಾರದಿಂದ ಪ್ರತಿನಿತ್ಯ ನೇರ ವಿಮಾನ ಹಾರಾಟ ಆರಂಭಿಸಿದೆ. ಜೊತೆಗೆ ಜನವರಿ 1ರಿಂದ ಹೆಚ್ಚುವರಿ ವಿಮಾನ ಹಾರಾಟ ಇರಲಿದೆ.
ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಡುವ ವಿಮಾನವು ನವಿ ಮುಂಬೈಗೆ 8.10ಕ್ಕೆ ತಲುಪಲಿದೆ. ನವಿ ಮುಂಬೈನಿಂದ 8.55ಕ್ಕೆ ಹೊರಟು, ಬೆಂಗಳೂರಿಗೆ 11.05ಕ್ಕೆ ತಲುಪಲಿದೆ.
ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ವಾರದ ಐದು ದಿನ ವಿಮಾನ ಸೇವೆ ಕಲ್ಪಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 1ರಿಂದ ಹೆಚ್ಚುವರಿ ವಿಮಾನವೊಂದು ಬೆಂಗಳೂರಿನಿಂದ ಸಂಜೆ 4.55ಕ್ಕೆ ಹೊರಟು ನವಿ ಮುಂಬೈಗೆ 6.55ಕ್ಕೆ ತಲುಪಲಿದೆ. ನವಿ ಮುಂಬೈನಿಂದ 7.35ಕ್ಕೆ ಹೊರಟು 9.35ಕ್ಕೆ ಬೆಂಗಳೂರಿಗೆ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.