ADVERTISEMENT

ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ನೇರ ವಿಮಾನ ಸೇವೆ ಆರಂಭಿಸಿದ ಏರ್ ಇಂಡಿಯಾ

ಪಿಟಿಐ
Published 18 ಸೆಪ್ಟೆಂಬರ್ 2025, 13:09 IST
Last Updated 18 ಸೆಪ್ಟೆಂಬರ್ 2025, 13:09 IST
ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌
ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌   

ಬೆಂಗಳೂರು: ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ನೇರ ವಿಮಾನ ಸೇವೆಯನ್ನು ಗುರುವಾರದಿಂದ ಆರಂಭಿಸಿದೆ. ಹೊಸ ಸೇವೆಯು ಪ್ರತಿದಿನವೂ ಇರಲಿದೆ.

ವಿಶೇಷ ಪರಿಚಯಾತ್ಮಕ ಬೆಲೆ ದ್ವಿಮುಖ ಸಂಚಾರಕ್ಕೆ ₹16,800 ಇದೆ. ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ₹9 ಸಾವಿರ ಮತ್ತು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ₹8,850 ಇದೆ. ಪ್ರಯಾಣಿಕರು ಕಂಪನಿಯ ವೆಬ್‌ಸೈಟ್‌, ಮೊಬೈಲ್‌ ಆ್ಯಪ್ ಮೂಲಕ ಬುಕಿಂಗ್‌ ಮಾಡಿಕೊಳ್ಳಬಹುದಾಗಿದೆ.

ಬೆಂಗಳೂರಿನಿಂದ ಪ್ರತಿನಿತ್ಯ ಬೆಳಿಗ್ಗೆ 11ಕ್ಕೆ ಹೊರಟು, ಬ್ಯಾಂಕಾಕ್‌ಗೆ ಸಂಜೆ 4.45ಕ್ಕೆ ತಲುಪಲಿದೆ. ಬ್ಯಾಂಕಾಕ್‌ನಿಂದ ಸಂಜೆ 5.45ಕ್ಕೆ ಹೊರಟು ಬೆಂಗಳೂರಿಗೆ 8.30ಕ್ಕೆ ತಲುಪಲಿದೆ ಎಂದು ತಿಳಿಸಿದೆ.

ADVERTISEMENT

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.