ADVERTISEMENT

ಅಮೆರಿಕಕ್ಕೆ ತೆರಳುವ ಕೆಲವು ಮಾರ್ಗಗಳಲ್ಲಿ ಸೇವೆ ತಗ್ಗಿಸಿದ ಏರ್‌ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 18:06 IST
Last Updated 20 ಮಾರ್ಚ್ 2023, 18:06 IST
   

ನವದೆಹಲಿ: ಏರ್ ಇಂಡಿಯಾ ಕಂಪನಿಯು ಅಮೆರಿಕಕ್ಕೆ ತೆರಳುವ ಕೆಲವು ಮಾರ್ಗಗಳಲ್ಲಿ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಿದೆ. ವಿಮಾನದ ಸಿಬ್ಬಂದಿ ಕೊರತೆ ಇದಕ್ಕೆ ಕಾರಣ.

ಇನ್ನು ಮೂರು ತಿಂಗಳುಗಳಲ್ಲಿ ಬೋಯಿಂಗ್‌ 777 ವಿಮಾನಗಳಿಗೆ ಏರ್ ಇಂಡಿಯಾ ಕಂಪನಿಯು 100 ಪೈಲಟ್‌ಗಳನ್ನು ಹೊಂದಲಿದೆ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT