ADVERTISEMENT

ಹೊಸ ಲೋಗೊ ಸಂಸ್ಥೆಯ ವಿಶ್ವಾಸವನ್ನು ಸೂಚಿಸುತ್ತದೆ: ಏರ್‌ ಇಂಡಿಯಾ

ಪಿಟಿಐ
Published 10 ಆಗಸ್ಟ್ 2023, 15:56 IST
Last Updated 10 ಆಗಸ್ಟ್ 2023, 15:56 IST
ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಅವರು ಏರ್‌ ಇಂಡಿಯಾದ ಹೊಸ ಲೋಗೊ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು –ಪಿಟಿಐ ಚಿತ್ರ
ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಅವರು ಏರ್‌ ಇಂಡಿಯಾದ ಹೊಸ ಲೋಗೊ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ಟಾಟಾ ಸಮೂಹದ ಒಡೆತನದ ಏರ್‌ ಇಂಡಿಯಾ ವಿಮಾನಯಾನ ಕಂಪನಿಯು ಹೊಸ ಲೋಗೊ ಮತ್ತು ವಿಮಾನದ ಬಣ್ಣವನ್ನು ಗುರುವಾರ ಅನಾವರಣ ಮಾಡಿದೆ.

ಏರ್‌ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡ ಬಳಿಕ ಟಾಟಾ ಸಮೂಹವು ಅದಕ್ಕೆ ಹೊಸ ರೂಪ ಕೊಡುವ ಭಾಗವಾಗಿ ಈ ಕ್ರಮ ಕೈಗೊಂಡಿದೆ.

ಕಂಪನಿಯ ಹೊಸ ಲೋಗೊ ಮಿತಿಯಿರದ ಸಾಧ್ಯತೆಗಳು, ಪ್ರಗತಿಶೀಲತೆ ಹಾಗೂ ಮುನ್ನೋಟದ ಕುರಿತು ಸಂಸ್ಥೆಯ ವಿಶ್ವಾಸವನ್ನು ಸೂಚಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.