ADVERTISEMENT

ವಿಮಾನ ಪ್ರಯಾಣ ಜುಲೈನಿಂದ ತುಟ್ಟಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 16:35 IST
Last Updated 8 ಜೂನ್ 2019, 16:35 IST
   

ನವದೆಹಲಿ (ಪಿಟಿಐ): ವಿಮಾನ ಪ್ರಯಾಣವು ಜುಲೈ 1ರಿಂದ ತುಸು ತುಟ್ಟಿಯಾಗಲಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ದೇಶದ ಪ್ರತಿ ಪ್ರಯಾಣಿಕರ ಮೇಲಿನ ವಿಮಾನ ಸುರಕ್ಷತಾ ಶುಲ್ಕವನ್ನು (ಎಎಸ್‌ಎಫ್‌) ₹ 130 ರಿಂದ ₹ 150ಕ್ಕೆ ಹೆಚ್ಚಿಸಿದೆ. ವಿದೇಶಿ ಪ್ರಯಾಣಿಕರ ಮೇಲಿನ ‘ಎಎಸ್‌ಎಫ್‌’ ₹224 ರಿಂದ ₹ 335 ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 1 ರಿಂದ ಪ್ರಯಾಣಿಕರ ಸೇವಾ ಶುಲ್ಕಕ್ಕೆ (ಪಿಎಸ್ಎಫ್‌) ಬದಲಾಗಿ ವಿಮಾನ ಸುರಕ್ಷತಾ ಶುಲ್ಕ (ಎಎಸ್‌ಎಫ್‌) ಜಾರಿಗೆ ಬರಲಿದೆ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.