ADVERTISEMENT

ಏರ್‌ಏಷ್ಯಾ ಇಂಡಿಯಾ ಸಂಪೂರ್ಣವಾಗಿ ಟಾಟಾ ತೆಕ್ಕೆಗೆ

ಪಿಟಿಐ
Published 2 ನವೆಂಬರ್ 2022, 13:44 IST
Last Updated 2 ನವೆಂಬರ್ 2022, 13:44 IST
ಏರ್‌ಏಷ್ಯಾ ಇಂಡಿಯಾ
ಏರ್‌ಏಷ್ಯಾ ಇಂಡಿಯಾ   

ನವದೆಹಲಿ: ಏರ್‌ಏಷ್ಯಾ ಇಂಡಿಯಾ ಕಂಪನಿಯಲ್ಲಿ ತಾನು ಹೊಂದಿರುವ ಪಾಲನ್ನು ಏರ್‌ ಇಂಡಿಯಾ ಕಂಪನಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿರುವುದಾಗಿ ಮಲೇಷ್ಯಾದ ಏರ್‌ಏಷ್ಯಾ ಬುಧವಾರ ತಿಳಿಸಿದೆ.

ಟಾಟಾ ಸಮೂಹ ಮತ್ತು ಏರ್‌ಏಷ್ಯಾ ಮಾಲೀಕತ್ವದ ‘ಏರ್‌ಏಷ್ಯಾ ಇಂಡಿಯಾ’ ವಿಮಾನಯಾನ ಕಂಪನಿಯು 2014ರ ಜೂನ್‌ನಲ್ಲಿ ಆರಂಭವಾಗಿದೆ. ಈ ಕಂಪನಿಯಲ್ಲಿ ಟಾಟಾ ಸನ್ಸ್ ಶೇ 83.67ರಷ್ಟು ಷೇರುಗಳನ್ನು ಹಾಗೂ ಏರ್‌ಏಷ್ಯಾ ಶೇ 16.33ರಷ್ಟು ಷೇರುಗಳನ್ನು ಹೊಂದಿದೆ.

ಏರ್‌ ಇಂಡಿಯಾ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌, ವಿಸ್ತಾರಾ, ಏರ್‌ಏಷ್ಯಾ ಇಂಡಿಯಾ ವಿಮಾನಯಾನ ಕಂಪನಿಗಳು ಟಾಟಾ ಸಮೂಹಕ್ಕೆ ಸೇರಿವೆ. ವಿಸ್ತಾರಾ ಕಂಪನಿಯಲ್ಲಿ ಸಿಂಗಪುರ ಏರ್‌ಲೈನ್ಸ್ ಕೂಡ ಪಾಲು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.