ADVERTISEMENT

Airtel| ಬೇರೆ ನೆಟ್‌ವರ್ಕ್‌ಗೆ ಮಾಡುವ ಕರೆ ಮಿತಿ ಸಡಿಲಗೊಳಿಸಿದ ಏರ್‌ಟೆಲ್‌

ಪಿಟಿಐ
Published 8 ಡಿಸೆಂಬರ್ 2019, 2:17 IST
Last Updated 8 ಡಿಸೆಂಬರ್ 2019, 2:17 IST
   

ನವದೆಹಲಿ: ಏರ್‌ಟೆಲ್‌ನಿಂದ ಬೇರೆ ನೆಟ್‌ವರ್ಕ್‌ಗೆ ಮಾಡುವ ಕರೆಗೆ ವಿಧಿಸಿದ್ದ ಗರಿಷ್ಠ ಸಮಯದ ಮಿತಿಯನ್ನು ಕೈಬಿಡಲಾಗಿದೆ.

ಅನಿಯಮಿತ ಪ್ಲ್ಯಾನ್‌ ಗಳಲ್ಲಿ ಹೊರಹೋಗುವ ಕರೆಗಳಿಗೆ ಯಾವುದೇ ಮಿತಿ ಇರುವುದಿಲ್ಲ. ಭಾನುವಾರದಿಂದಲೇ ಇದು ಅನ್ವಯವಾಗಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಹೊಸ ಪ್ಲ್ಯಾನ್‌ನಲ್ಲಿಏರ್‌ಟೆಲ್‌ನಿಂದ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡುವಾಗ ನಿಗದಿತ ಕಾಲ ಮಿರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ನೀಡಬೇಕಾಗಿತ್ತು. ಆದರೆ ಅದನ್ನು ಕೈಬಿಟ್ಟಿರುವುದಾಗಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.