ADVERTISEMENT

ಇಂದು ಎಜಿಆರ್‌ ಬಾಕಿ ಪಾವತಿ ಸಾಧ್ಯತೆ

ಪಿಟಿಐ
Published 16 ಫೆಬ್ರುವರಿ 2020, 19:45 IST
Last Updated 16 ಫೆಬ್ರುವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೂರಸಂಪರ್ಕ ಇಲಾಖೆಯ ಕಠಿಣ ಕ್ರಮದಿಂದ ತಪ್ಪಿಸಿಕೊಳ್ಳಲು ಕಂಪನಿಗಳು ಸೋಮವಾರವೇ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತ ಪಾವತಿಸುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ಹೇಳಿವೆ.

ದೂರಸಂಪರ್ಕ ಕಂಪನಿಗಳಾದ ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಮತ್ತು ಟಾಟಾ ಟೆಲಿ ಸರ್ವೀಸಸ್‌ ಕಂಪನಿಗಳು ಬಾಕಿ ಪಾವತಿಸುವ ಸಾಧ್ಯತೆ ಇದೆ. ಈ ಕಂಪನಿಗಳ ಒಟ್ಟಾರೆ ಬಾಕಿ ಮೊತ್ತ ₹ 1 ಲಕ್ಷ ಕೋಟಿಗೂ ಹೆಚ್ಚಿಗೆ ಇದೆ. ಆದರೆ, ಅದರಲ್ಲಿ ಅರ್ಧದಷ್ಟು ಮೊತ್ತವನ್ನು ಪಾವತಿಸುವುದಾಗಿ ಇಲಾಖೆಗೆ ತಿಳಿಸಿವೆ.

ಫೆ. 20ರ ಒಳಗಾಗಿ ₹ 10ಸಾವಿರ ಕೋಟಿ ಪಾವತಿಸುವುದಾಗಿ ಏರ್‌ಟೆಲ್ ಹೇಳಿತ್ತು. ಆದರೆ, ಅವಧಿ ವಿಸ್ತರಣೆಗೆ ಇಲಾಖೆ ನಿರಾಕರಿಸಿದೆ. ವೊಡಾಫೋನ್‌ ಐಡಿಯಾ ಕಂಪನಿ ಸಹ ಶೀಘ್ರವೇ ಬಾಕಿ ಪಾವತಿಸುವುದಾಗಿ ಹೇಳಿದೆ.

ADVERTISEMENT

ಒಟ್ಟಾರೆ ₹ 14.7 ಲಕ್ಷ ಕೋಟಿ ಮೊತ್ತದಲ್ಲಿ ₹ 1.13 ಲಕ್ಷ ಕೋಟಿ ವಸೂಲಿಯಾಗುವ ಅಂದಾಜು ಮಾಡಲಾಗಿದೆ. ಏಕೆಂದರೆ, ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಮತ್ತು ಏರ್‌ಸೆಲ್‌ ಕಂಪನಿಗಳು ದಿವಾಳಿ ಪ್ರಕ್ರಿಯೆಗೆ ಒಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.