ADVERTISEMENT

ಚೆನ್ನೈ–ಬೆಂಗಳೂರು ಮಾರ್ಗದಲ್ಲಿ ಆಕಾಸಾ ಸೇವೆ ಆರಂಭ

ಪಿಟಿಐ
Published 11 ಸೆಪ್ಟೆಂಬರ್ 2022, 3:09 IST
Last Updated 11 ಸೆಪ್ಟೆಂಬರ್ 2022, 3:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ:ಆಕಾಸಾ ಏರ್‌ ವಿಮಾನಯಾನ ಕಂಪನಿಯ ಚೆನ್ನೈ–ಬೆಂಗಳೂರು ಮಾರ್ಗದಲ್ಲಿ ಶನಿವಾರದಿಂದ ವಿಮಾನ ಸೇವೆಯನ್ನು ಆರಂಭಿಸಿದೆ.

‘ಚೆನ್ನೈನಿಂದ ವಾಣಿಜ್ಯ ಸೇವೆ ಆರಂಭಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ನಮ್ಮ ನೆಟ್‌ವರ್ಕ್‌ ವ್ಯಾಪ್ತಿಗೆ ಐದನೇ ನಗರ ಸೇರ್ಪಡೆಯಾಗಿದೆ’ ಎಂದು ಕಂಪನಿಯ ಸಹ ಸ್ಥಾಪಕ ಪ್ರವೀಣ್‌ ಅಯ್ಯರ್‌ ಹೇಳಿದ್ದಾರೆ. ‘ಈ ಹೊಸ ಮಾರ್ಗದಲ್ಲಿ ಎರಡೂ ಕಡೆಗಳಿಂದ ನಿತ್ಯವೂ ಎರಡು ಬಾರಿ ವಿಮಾನ ಸೇವೆ ಲಭ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್‌ 26ರಿಂದಚೆನ್ನೈ ಮತ್ತು ಕೊಚ್ಚಿ ಮಾರ್ಗದಲ್ಲಿಯೂ ವಿಮಾನ ಸಂಚಾರ ಆರಂಭಿಸಲಾಗುವುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.